ನ್ಯೂಸ್ ನಾಟೌಟ್ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆಯೇ ರಾಜ್ಯಾದ್ಯಂತ ಚರ್ಚೆ ಶುರುವಾಗಿತ್ತು. ಈ ಯೋಜನೆಯ ಫಲಾನುಭವಿಗಳು ಯಾರಾಗಬಹುದು ಅನ್ನೋ ಕುತೂಹಲವೂ ಮನೆ ಮಾಡಿತ್ತು. ಇದೀಗ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಜಾರಿ ಮಾಡಿದ್ದಾರೆ.ಈ ಮಧ್ಯೆ ಯುವಕನೋರ್ವ ಸಿದ್ದರಾಮಯ್ಯನವರೇ ಹೆಣ್ಣು ಸಿಗ್ತಿಲ್ಲ ಕನ್ಯೆ ಭಾಗ್ಯ ಕೊಡಿ ಎಂದು ಹೇಳಿ ಟ್ರೋಲ್ ಗೊಳಗಾಗಿದ್ದಾನೆ!
ಈತ ಸಿ.ಎಂ. ಸಿದ್ದರಾಮಯ್ಯ ಅವರಿಗೆ ‘ ಮುಖ್ಯಮಂತ್ರಿಗಳೇ ಮದುವೆಯಾಗಬೇಕೆಂದು ಎಷ್ಟೇ ಹುಡುಕಾಡಿದರೂ ಹೆಣ್ಣು ಸಿಕ್ತಿಲ್ಲ..ಇಂತಹ ನೋವು ಅನುಭವಿಸುತ್ತಿರುವವರು ಬಡಬಗ್ಗರು. ಅವರಿಗೆ ಆಸ್ತಿ ಇಲ್ಲ, ಹೊಲ ಇಲ್ಲ, ಹಣ ಇಲ್ಲ ಅದಕ್ಕೆ ಹೆಣ್ಣು ಯಾರು ಕೊಡ್ತಿಲ್ಲ. ದುಡ್ಡಿದ್ದವರಿಗೆ ಹೆಣ್ಣು ಸಿಗುತ್ತೆ, ಶ್ರೀಮಂತರಿಗೆ ಹೇಗೆ ಜೀವನವೋ ,ಬಡವರಿಗೂ ಹಾಗೆಯೇ ಜೀವನ…ಇದಕ್ಕಾಗಿ ಮಾನ್ಯ ಸಿದ್ದರಾಮಯ್ಯನವರಿಗೆ ಹೇಳುತ್ತಿದ್ದೀನಿ ದಯವಿಟ್ಟು ಕನ್ಯೆ ಬಾಗ್ಯ ಕೊಡಿ ಎಂದು ವಿನಂತಿಸಿದ್ದಾನೆ…
ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮಿ ಯೋಜನೆ ಅಡಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ, ಅನ್ನ ಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಇರುವ ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ 10 ಕೆಜಿ ಅಕ್ಕಿ, ಗೃಹ ಜ್ಯೋತಿ ಯೋಜನೆ ಅಡಿ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಯುವ ನಿಧಿ ಯೋಜನೆ ಅಡಿ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲಮೋ ಮಾಡಿದವರಿಗೆ ಭತ್ಯೆ ಕೊಡುವ ಯೋಜನೆಗಳನ್ನು ಸರ್ಕಾರ ಪ್ರಕಟಿಸಿದ್ದು,ಜಾರಿ ಮಾಡಿದೆ.