ನ್ಯೂಸ್ ನಾಟೌಟ್ : 102 ಮಕ್ಕಳು, 578 ಮೊಮ್ಮಕ್ಕಳು ಹಾಗೂ 12 ಹೆಂಡತಿಯರೊಂದಿಗೆ ಸಂಸಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಇನ್ನೂ ಮುಂದಕ್ಕೆ ಮಕ್ಕಳಾಗದಿರಲು ತನ್ನ 12 ಮಡದಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ಮುಂದಾಗಿದ್ದಾರೆ.
ಉಗಾಂಡಾದ ಲುಸಾಕಾದ 68 ವರ್ಷದ ಮೂಸಾ ಹಸಹ್ಯಾ ಕಸೆರಾ ಎಂಬ ಹೆಸರಿನ ವ್ಯಕ್ತಿಗೆ 12 ಪತ್ನಿಯರು ಸೇರಿದಂತೆ 102 ಮಕ್ಕಳು ಹಾಗೂ 578 ಮೊಮ್ಮಕ್ಕಳಿದ್ದಾರೆ. ಇಷ್ಟು ಮಕ್ಕಳ ತಂದೆಯಾದ ಬಳಿಕ ಇನ್ನು ಮುಂದಕ್ಕೆ ಮಕ್ಕಳಾಗದಿರಲು ತನ್ನ 12 ಮಡದಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ಮುಂದಾಗಿದ್ದಾರೆ.
“ಸವಾಲು ಏನೆಂದರೆ ನಾನು ನನ್ನ ಮೊದಲ ಮತ್ತು ಕೊನೆಯ ಹತ್ತು ಮಕ್ಕಳ ಹೆಸರನ್ನು ಮಾತ್ರ ನೆನಪಿಸಿಕೊಳ್ಳಬಲ್ಲೆ ಆದರೆ ಕೆಲವು ಮಕ್ಕಳ ಹೆಸರೇ ನೆನಪಿಲ್ಲ ಎಂದು ಮೂಸಾ ಹೇಳಿದ್ದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎ ಎಫ್ ಪಿಯಲ್ಲಿನ ವರದಿಯ ಪ್ರಕಾರ, 1972 ಆತ ತನ್ನ ಮೊದಲ ಹೆಂಡತಿಯನ್ನು ಮದುವೆಯಾದಾಗ ಮೂಸಾ ಅವರಿಗೆ ಕೇವಲ 17 ವರ್ಷ ವಯಸ್ಸು. ಇದಾದ ಬಳಿಕ ಅವರ ಕುಟುಂಬ ಮತ್ತು ಸಂಬಂಧಿಕರು ಹೆಚ್ಚಿನ ಮಹಿಳೆಯರನ್ನು ಮದುವೆಯಾಗಲು ಮತ್ತು ಅವರ ಕುಟುಂಬವನ್ನು ವಿಸ್ತರಿಸಲು ಸಲಹೆ ನೀಡಿದ್ದರು. ಅದಕ್ಕಾಗಿ ಅವರು 12 ಮಹಿಳೆಯರನ್ನು ವಿವಾಹವಾಗಿ 102 ಮಕ್ಕಳಿಗೆ ತಂದೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಆದರೆ, ಈಗ ತನ್ನ ಕುಟುಂಬದ ಊಟ, ಶಿಕ್ಷಣ, ಬಟ್ಟೆ ಭರಿಸಲು ಸಾಧ್ಯವಾಗದೆ ಆರ್ಥಿಕವಾಗಿ ಕುಸಿದ್ದಿದ್ದೇನೆ. ಜೊತೆಗೆ ಇಬ್ಬರು ಹೆಂಡತಿಯರು ಈಗಾಗಲೇ ನನ್ನನ್ನು ತೊರೆದಿದ್ದಾರೆ ಎಂದು ಮೂಸಾ ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.