ನ್ಯೂಸ್ ನಾಟೌಟ್ : ನವವಿವಾಹಿತರು ತಮ್ಮ ಮದುವೆಯ ರಾತ್ರಿಯೇ ಶವವಾಗಿ ಪತ್ತೆಯಾಗಿದ್ದಾರೆ.ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು,ಪ್ರತಾಪ್ ಯಾದವ್(22), ಪುಷ್ಪಾ (20) ಮೃತ ದಂಪತಿ. ಮದುವೆಯಾದ ರಾತ್ರಿಯೇ ನವದಂಪತಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.ಮೇ 30 ರಂದು ಪ್ರತಾಪ್ ಯಾದವ್ ಹಾಗೂ ಪುಷ್ಪಾ ಮದುವೆ ನಡೆದಿತ್ತು. ಮದುವೆಯಾದ ರಾತ್ರಿ ನವಜೋಡಿ ತಮ್ಮ ಕೋಣೆಗೆ ಹೋಗಿದ್ದಾರೆ. ಮರುದಿನ ಬೆಳಗ್ಗೆ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.