ನ್ಯೂಸ್ ನಾಟೌಟ್: ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಕಷ್ಟದಲ್ಲಿರುವ ರೋಗಿಯ ಜೀವ ಉಳಿಸುವುದು ಅಗತ್ಯ. ವಿವಿಧ ಭಾಗಗಳಲ್ಲಿ ಸೇವಾ ಭಾರತಿ ನೀಡುವ ಸೇವೆ ಮಾದರಿಯಾಗಿದ್ದು, ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ ಎಂದು ಮಾಜಿ ಸಚಿವ ಎಸ್. ಅಂಗಾರ ಹೇಳಿದರು.
ಸುಳ್ಯ ಸಮೀಪದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸುಳ್ಯ ಸೇವಾಭಾರತಿ ಹೆಲ್ಪ್ಲೈನ್ ಟ್ರಸ್ಟ್ ನೂತನ ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆಗೊಳಿಸಿ ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮುಖ್ಯ ಅತಿಥಿ ಶಾಸಕಿ ಕು.ಭಾಗೀರಥಿ ಮುರುಳ್ಯ ಮಾತನಾಡಿ, ಕರೋನಾ ಸಂದರ್ಭ ಆಂಬುಲೆನ್ಸ್ ಸಿಬ್ಬಂದಿ ತಮ್ಮ ಜೀವವನ್ನು ಲೆಕ್ಕಿಸದೆ ರೋಗಿಯ ಜೀವ ರಕ್ಷಣೆ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಇವರ ಈ ಸೇವಾ ಕಾರ್ಯ ಪವಿತ್ರವಾದುದು. ಇದಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದರು.
ಸೇವಾ ಭಾರತಿ ಮಂಗಳೂರು ವಿಭಾಗ ಪ್ರಮುಖ ನಾರಾಯಣ ಶೆಣೈ ವಿಷಯ ಮಂಡಿಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಾಳಕ ಚಂದ್ರಶೇಖರ ತಳೂರು, ದಿ ಪುಟ್ಟಪ್ಪ ಜೋಷಿ ಮೆಮೊರಿಯಲ್ ಟ್ರಸ್ಟ್ನ ಅಧ್ಯಕ್ಷ ಸುಧಾಕರ ಕಾಮತ್, ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಮಾಜದ ಅಧ್ಯಕ್ಷ ಹೇಮಂತ್ ಕುಮಾರ್ ಕಂದಡ್ಕ ಉಪಸ್ಥಿತರಿದ್ದರು. ಸೇವಾ ಭಾರತಿ ಹೆಲ್ಪ್ಲೈನ್ ಅಧ್ಯಕ್ಷ ಡಾ. ಮನೋಜ್ ಕುಮಾರ್ ಎ.ಡಿ.ಸ್ವಾಗತಿಸಿದರು. ರಾಜೇಶ್ ಮೆನಾಲ ವಂದಿಸಿದರು. ಎ.ಟಿ. ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ವಿನಯ್ ಕುಮಾರ್ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು. ಆಂಬುಲೆನ್ಸ್ ಸೇವೆಗೆ ಮೊ. 9448302655, 9901724478 ಸಂಪರ್ಕಿಸಬಹುದು.