ನ್ಯೂಸ್ ನಾಟೌಟ್ :ಫೋನ್ ಕಳ್ಳತನದ ಶಂಕೆಯ ಮೇಲೆ ಮುಸ್ಲಿಂ ಕಾರ್ಮಿಕನೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ, ಥಳಿಸಿದ್ದಲ್ಲದೇ ತಲೆ ಬೋಳಿಸಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ ಘಟನೆ ವರದಿಯಾಗಿದೆ.ಇದಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮೂವರು ಯುವಕರು ಸೇರಿ ಈ ಕೃತ್ಯ ನಡೆಸಿದ್ದಾರೆಂದು ತಿಳಿದು ಬಂದಿದೆ.
ಸಾಹಿಲ್ ಹಲ್ಲೆಗೊಳಗಾದ ವ್ಯಕ್ತಿ.ಈತನನ್ನು ಮರಕ್ಕೆ ಕಟ್ಟಿ,ತಲೆ ಬೋಳಿಸಿ ಬಲವಂತವಾಗಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿಸಿದ್ದಾರೆ ಎಂದು ವರದಿಯಾಗಿದೆ.ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಫೋನ್ ಕಳ್ಳತನದ ಶಂಕೆಯ ಮೇಲೆ ಈ ಕೃತ್ಯ ನಡೆಸಲಾಗಿದೆ.ಈ ವೇಳೆ “ಜೈ ಶ್ರೀ ರಾಮ್” ಎಂದು ಕೂಗುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.ಈ ಸಂದರ್ಭ ಸಾಹಿಲ್ನನ್ನು ಮರಕ್ಕೆ ಕಟ್ಟಿ ಹಾಕಲಾಗಿದ್ದು, ತಲೆ ಬೋಳಿಸಲಾದ ವಿಡಿಯೋ ವೈರಲ್ ಆಗಿದೆ. ಘಟನೆಯ ದೃಶ್ಯವನ್ನು ಸ್ವತಃ ಆರೋಪಿಗಳೇ ವಿಡಿಯೋ ಮಾಡಿದ್ದಾರೆ.ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸಾಹಿಲ್ನ ತಂದೆ ಶಕೀಲ್ ಮಗನ ಮೇಲೆ ಹಲ್ಲೆ ಮಾಡಿದವರ ವಿರುದ್ಧವಾಗಿ ದೂರು ನೀಡಿದ್ದಾರೆ.ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಕುಟುಂಬದಿಂದ ಬಂದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಾಕೋಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.ಆರೋಪಿಗಳನ್ನು ಗಜೇಂದ್ರ, ಸೌರಭ್ ಮತ್ತು ಧನ್ನಿ ಎಂದು ಗುರುತಿಸಲಾಗಿದೆ ” ಎಂದು ಹೇಳಿದ್ದಾರೆ.ಸಾಹಿಲ್ನ ತಂದೆ ಕಣ್ಣೀರಿಡುತ್ತಾ ಮಾತನಾಡಿ, ತನ್ನ ಮಗ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ಆತನನ್ನು ಹಿಡಿದು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ.