ನ್ಯೂಸ್ ನಾಟೌಟ್ : ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಭರವಸೆಯನ್ನು ಈಡೇರಿಸಿದೆ. ಇದೀಗ ಪ್ರಮುಖ ಯೋಜನೆಯಾಗಿದ್ದ ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದ ಚಾಲನೆ ಸಿಗಬೇಕಿತ್ತು.ಆದರೆ ಸರ್ಕಾರದ ಕ್ಯಾಬಿನೆಟ್ ಸಭೆಯ ಬಳಿಕ ಈ ಗ್ಯಾರಂಟಿ ಜಾರಿ ಮುಂದೂಡಿಕೆಯಾಗಿದ್ದಾಗಿ ವರದಿಯಾಗಿದೆ. ಈ ಕುರಿತು ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಸುದ್ದಿಗೋಷ್ಟಿ ನಡೆಸಿ ಇದರ ಮಾಹಿತಿ ನೀಡಿದ್ದರು. ಯಾವ ರೀತಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು ಯಾರೆಲ್ಲಾ ಸಲ್ಲಿಕೆ ಮಾಡಬೇಕು ಎನ್ನುವುದರ ಬಗ್ಗೆ ವಿವರಿಸಿದ್ದರು.
ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವೆ’ ಗೃಹ ಲಕ್ಷ್ಮಿ ಯೋಜನೆಯ ಬಾಪುಜಿ ಸೇವಾ ಕೇಂದ್ರದಲ್ಲೂ ಕೂಡ ಆನ್ ಲೈನ್ ನಲ್ಲಿ ಅರ್ಜಿ ತುಂಬಬಹುದು. ನಾಡಕಚೇರಿಯಲ್ಲೂ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಸಲ್ಲಿಕೆ ಆರಂಭ 4-5 ದಿನಗಳು ವಿಳಂಬ ಆಗಬಹುದು ಎಂದು ತಿಳಿಸಿದ್ದಾರೆ.ಅರ್ಜಿ ಸಲ್ಲಿಕೆ ಆರಂಭ ವಿಳಂಬಕ್ಕೆ ಕಾರಣವನ್ನು ವಿವರಿಸಿರುವ ನೂತನ ಸಚಿವರು, ಒಂದು ಅರ್ಜಿ ತುಂಬಲು 4-7 ನಿಮಿಷ ಆಗುತ್ತಿದೆ. ಅದರಿಂದ ಹೊಸ ಆ್ಯಪ್ ಡಿಸೈನ್ ಮಾಡಲು 4-6 ದಿನ ಸಮಯ ಕೇಳಿದ್ದಾರೆ. 4-5 ದಿನಗಳು ಅರ್ಜಿ ಸಲ್ಲಿಸಲು ಲೇಟ್ ಆಗುತ್ತೆ’ ಎಂದು ವಿವರಿಸಿದ್ದಾರೆ.