ನ್ಯೂಸ್ ನಾಟೌಟ್ :ಮಡಿಕೇರಿಯಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ನ ಮಂಥರ್ ಗೌಡ ಗೆಲುವಿಗಾಗಿ ಹರಕೆ ಹೊತ್ತಿದ್ದ ಅಭಿಮಾನಿಗಳು ಆ ಹರಕೆ ಈಡೇರಿಸಲೆಂದು 135 ಕಿ.ಮೀ ದೂರ ಪಾದಯಾತ್ರೆ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಿದರು. ಗುರುವಾರ ಕುಶಾಲನಗರ ತಾಲೂಕಿನ ಕೂಡುಮಂಗಳೂರಿನಿಂದ ಆರಂಭಿಸಿದ ಅಭಿಮಾನಿಗಳ ಯಾತ್ರೆಯು ಚಾಮುಂಡಿ ಬೆಟ್ಟದಲ್ಲಿ ಕೊನೆಯಾಗಲಿದೆ ಎಂದು ತಿಳಿದು ಬಂದಿದೆ.
ಈ ಪಾದಯಾತ್ರೆಯಲ್ಲಿ ಸಂತೋಷ್, ಅರುಣ್ ಹಾಗೂ ಮಾದಪ್ಪ ಎಂಬ ಯುವಕರು ಪಾಲ್ಗೊಂಡಿದ್ದು, ಎರಡು ದಿನಗಳ ಕಾಲ ಈ ಈ ಪಾದಯಾತ್ರೆ ಇರಲಿದೆ. ನಾಳೆ ದಿನ ಮೈಸೂರಿಗೆ ತಲುಪಲಿದ್ದು, ನಂತರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಅಭಿಮಾನಿಗಳ ಈ ವಿಶಿಷ್ಟ ಹರಕೆ ಬಗ್ಗೆ ಮಾತನಾಡಿದ ಶಾಸಕ ಮಂಥರ್ ಗೌಡ, ಯುವಕರ ಅಭಿಮಾನಕ್ಕೆ ಚಿರಋಣಿಯಾಗಿದ್ದಾನೆ.
ಚುನಾವಣೆ ಸಮಯದಲ್ಲಿ ಅವರು ನನಗಾಗಿ ತುಂಬಾ ಶ್ರಮಪಟ್ಟಿದ್ದಾರೆ ಎಂದು ಹೇಳಿದ್ರು. ದೇವಾಲಯಕ್ಕೆ ತೆರಳಿದ ಬಳಿಕ ಪೂಜೆಯಲ್ಲಿ ನಾನು ತಾಲೂಕಿನ ಜನರೊಂದಿಗೆ ಪಾಲ್ಗೊಳ್ಳಲಿದ್ದೇನೆ ಎಂದವರು ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಪವಾಡವೆಂಬಂತೆ ಕಳೆದ 20 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.ಮಂಥರ್ ಗೌಡ 83,949 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ 79,429 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.