ನ್ಯೂಸ್ ನಾಟೌಟ್ : ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ ಕೇರಳ ಮೂಲದ ಕಾರ್ಮಿಕ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.ಸಹೋದ್ಯೋಗಿಗಳೊಂದಿಗೆ ಸ್ನಾನಕ್ಕೆಂದು ಇಳಿದ ಯುವಕ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಕೇರಳದ ಕಣ್ಣೂರು ಜಿಲ್ಲೆಯ ಆಲಕ್ಕೋಡು ನಿವಾಸಿ ಅಪ್ಪು ಶ್ರೀಜೇಶ್ (34 ವ) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಅಪ್ಪು ಶ್ರೀಜೇಶ್ ನಾಪೋಕ್ಲು ಸಮೀಪದ ಹಳೆ ತಾಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ಸಹೋದ್ಯೋಗಿಗಳೊಂದಿಗೆ ಕಟ್ಟಡ ಕೆಲಸ ಮಾಡುತ್ತಿದ್ದ. ಈ ವೇಳೆ ಬುಧವಾರ (ಜೂನ್ ೭ )ಸಂಜೆ ಬೇಗನೆ ಕೆಲಸ ಮುಗಿಸಿ ಮೂರು ಜನ ಸಹೋದ್ಯೋಗಿಗಳೊಂದಿಗೆ ಕಾವೇರಿ ನದಿಯಲ್ಲಿ ಸ್ನಾನಕ್ಕಿಳಿದಿದ್ದಾನೆ . ಹೊಳೆಯಲ್ಲಿ ಕೆಸರು ಹೂಳು ತುಂಬಿಕೊಂಡಿರುವ ಕಾರಣ ಕಾಲು ಹೂತು ಹೋಗಿ ಮೇಲಕ್ಕೆ ಬಾರದೆ ಸಾವನ್ನಪಿರಬಹುದು ಎಂದು ಶಂಕಿಸಲಾಗಿದೆ.
ಕೂಡಲೇ ಸ್ಥಳೀಯರಿಗೆ ಮಾಹಿತಿ ತಿಳಿಸಿದಾಗ , ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಎಎಸ್ಐ ಗೋಪಾಲಕೃಷ್ಣ ಸಿಬ್ಬಂದಿ ರವಿಕುಮಾರ್ , ಶರತ್ ಲವ ಕುಮಾರ್ , ಶರೀಫ್ , ಸ್ಥಳೀಯರಾದ ಅನೀಫ್ , ಕರೀಂ , ರಜಾಕ್ ಒಂದು ಘಂಟೆಗಳ ಕಾಲ ನೀರಿನಲ್ಲಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆಂದು ತಿಳಿದು ಬಂದಿದೆ.