ನ್ಯೂಸ್ ನಾಟೌಟ್ : ಲಿವ್ ಇನ್ ಗೆಳತಿಯನ್ನು ಕೊಂದು 20 ಪೀಸ್ ಗಳನ್ನಾಗಿ ಮಾಡಿ ಕುಕ್ಕರ್ ನಲ್ಲಿ ಬೇಯಿಸಿ ಬೀದಿ ನಾಯಿಗಳಿಗೆ ಹಂಚಿರುವ ಭಯಾನಕ ಘಟನೆ ಇಡೀ ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. ಸರಸ್ವತಿ ವೈದ್ಯ ಎಂಬ ಯುವತಿ ಮೃತ ದುರ್ದೈವಿ.ಈಕೆಯನ್ನು ಆಕೆ ಜತೆಗಿದ್ದ ಮನೋಜ್ ರಮೇಶ್ ಸಾಣೆ ಭೀಕರವಾಗಿ ಕೊಂದಿದ್ದ.ಇದೀಗ ಆರೋಪಿ ಮನೋಜ್ ರಮೇಶ್ ಸಾಣೆ ಬಗ್ಗೆ ಮಾಹಿತಿ ಹಾಕುತ್ತಿರುವ ಪೊಲೀಸರಿಗೆ ಆತನಿಗೆ ಅಶ್ಲೀಲ ಚಿತ್ರ (ಪೋರ್ನೋಗ್ರಫಿ) ವೀಕ್ಷಣೆಯ ಹುಚ್ಚು ಇತ್ತು ಎಂಬ ವಿಚಾರ ಬಹಿರಂಗವಾಗಿದೆ. ಪೊಲೀಸರು ಆತನನ್ನು ವಿಚಾರಣೆ ಮಾಡುವ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ!.
ಮನೋಜ್(56)ಗೆ ಸ್ವಲ್ಪ ಮರೆವಿತ್ತು, ಹಾಗಾಗಿ ಪೋರ್ನ್ ಸೈಟ್ಗಳ ಹೆಸರನ್ನು ಪೇಪರ್ನಲ್ಲಿ ಬರೆದಿಡುತ್ತಿದ್ದ. ಇದು ಕೂಡ ಪೊಲೀಸರಿಗೆ ದೊರೆತಿದೆ. ತನ್ನನ್ನು ಖುಷಿಯಾಗಿ ಮತ್ತು ತೃಪ್ತಿಯಾಗಿ ಇಡಲು ಸಾಧ್ಯವಾಗದ ಬಗ್ಗೆ ಮನೋಜ್ನೊಂದಿಗೆ ಸರಸ್ವತಿ ಜಗಳವಾಡುತ್ತಿದ್ದಳು ಅಲ್ಲದೇ ಆತ ಮೊಬೈಲ್ನಲ್ಲಿ ಬೇರೆ ಮಹಿಳೆಯರ ನಗ್ನ ದೇಹಗಳನ್ನು ವೀಕ್ಷಿಸುವುದರ ಕುರಿತು ಸರಸ್ವತಿ ಕೆರಳುತ್ತಿದ್ದಳು ಎಂಬುದು ತಿಳಿದುಬಂದಿದೆ.
ಪೊಲೀಸರು ಆರೋಪಿ ಮನೋಜ್ನ ಮೊಬೈಲ್ ವಶಕ್ಕೆ ಪಡೆದು, ಆತನ ಬ್ರೌಸಿಂಗ್ ಹಿಸ್ಟರಿಯನ್ನು ಪರಿಶೀಲಿಸಿದ್ದಾರೆ. ಹತ್ತಾರು ಪೋರ್ನ್ ಸೈಟ್ಗಳನ್ನು ಆತ ವೀಕ್ಷಿಸುತ್ತಿದ್ದುದು ಕಂಡುಬಂದಿದೆ ಎಂಬ ವಿಷಯ ತಿಳಿದು ಬಂದಿದೆ. ಹತ್ಯೆಯಾದ ಜೂ.4ರಂದು ಆತ ಮೃತದೇಹ ಕೆಡದಂತೆ ಇಡುವ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿರುವುದೂ ಕೂಡ ಮಾಹಿತಿ ಲಭ್ಯವಾಗಿದೆ. ಜತೆಗೆ ಮಾರುಕಟ್ಟೆಯಿಂದ ನಾಲ್ಕು ನೀಲಗಿರಿ ತೈಲ ಬಾಟಲಿ ಖರೀದಿಸಿ, ದುರ್ವಾಸನೆ ಹಬ್ಬದಂತೆ ಮೃತದೇಹದ ಮೇಲೆ ಹಾಕಿದ್ದಾನೆ ಎನ್ನುವ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ.
ಅಪಾರ್ಟ್ಮೆಂಟ್ನಿಂದ ದುರ್ನಾತ ಬೀರುತ್ತಿರುವುದನ್ನು ಗಮನಿಸಿದ ಸ್ಥಳೀಯ ಅಪಾರ್ಟ್ಮೆಂಟ್ ನಿವಾಸಿ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಬುಧವಾರ ಅಪಾರ್ಟ್ಮೆಂಟ್ ಒಳಗೆ ಕಾಲಿಟ್ಟಾಗ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಮನೆಯೊಳಗೆ ಮೂಗು ಮುಚ್ಚುವಂತೆ ದುರ್ನಾತ ಬರುತ್ತಿತ್ತು. ಹೆಜ್ಜೆ ಮುಂದಡಿಯಿಡುತ್ತಿದ್ದಂತೆ ಅಲ್ಲಲ್ಲಿ ದೇಹದ ತುಂಡಾದ ಭಾಗಗಳು ಹರಡಿಕೊಂಡಿದ್ದವು. ಅಡುಗೆ ಮನೆಗೆ ಹೋದರೆ ಅಲ್ಲಿ ಪಾತ್ರೆಗಳಲ್ಲಿ ಬೇಯಿಸಿದ ಮತ್ತು ಹುರಿದ ಮಾಂಸಗಳು ಇದ್ದವು. ಇದನ್ನು ಕಂಡು ತಡೆದುಕೊಳ್ಳಲಾರದ ಪೊಲೀಸರು ಅಲ್ಲೇ ವಾಂತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿಂದ ಸಂಜೆ ಮನೆಗೆ ಬಂದಾಗಲೂ ಪೊಲೀಸರಿಗೆ ಆ ಭಯಾನಕ ದೃಶ್ಯಗಳಿಂದ ಹೊರಬರಲಾಗಲಿಲ್ಲ. ಪರಿಣಾಮ ಅಂದು ರಾತ್ರಿ ಊಟವೇ ಮಾಡಿಲ್ಲ, ನಿದ್ದೆಯೂ ಮಾಡಿಲ್ಲ ಎಂದು ಪೊಲೀಸರೊಬ್ಬರು ಹೇಳಿದ್ದಾರೆ.
ಮುಂಬೈನ (Mumbai) ಥಾಣೆಯ ಮೀರಾ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಮೃತದೇಹವನ್ನು ಮರ ಕತ್ತರಿಸುವ ಸಾಧನದಿಂದ ಯುವತಿಯನ್ನು ಕತ್ತರಿಸಿದ್ದು,ಕೆಡದಂತೆ ಇಡಲು ಕುಕ್ಕರ್ನಲ್ಲಿಟ್ಟು ಬೇಯಿಸಿದ್ದಾನೆ ಎನ್ನುವ ವಿಚಾರ ಗೊತ್ತಾಗಿದ್ದು,ಮೃತದೇಹ ಪೂರ್ಣವಾಗಿ ವಿಲೇವಾರಿಯಾಗುವ ಮುನ್ನವೇ ನೆರೆಮನೆಯವರಿಗೆ ದುರ್ವಾಸನೆ ಬಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಕೊಲೆ ಬಹಿರಂಗವಾಗಿದೆ.