ನ್ಯೂಸ್ ನಾಟೌ್ಟ್: ಕೊಡಗು ವೀರರ ನಾಡು. ದೇಶ ಸೇವೆಯ ವಿಷಯ ಬಂದಾಗ ಕೊಡಗಿನ ಜನ ಮೊದಲಾಗಿ ನಿಲ್ಲುತ್ತಾರೆ. ಅದೆಷ್ಟೋ ಸೈನಿಕರನ್ನು ಭಾರತೀಯ ಸೈನ್ಯಕ್ಕೆ ಕೊಡುಗೆಯಾಗಿ ಕೊಟ್ಟ ಕೊಡಗಿನಿಂದ ಇದೀಗ ಮತ್ತೋರ್ವ ಯುವಕ ದೇಶ ಸೇವೆಗೆ ಆಯ್ಕೆಯಾಗಿದ್ದಾರೆ.
ಇಂಡಿಯನ್ ಮಿಲಿಟರಿ ಆಕಾಡೆಮಿಯ 152ನೇ ಕೋರ್ಸಿನ ನಿರ್ಗಮನ ಪಥ ಸಂಚಲನದಲ್ಲಿ ಚೆಯ್ಯಂಡಾಣೆ ಸಮೀಪದ ಮರಂದೋಡ ಗ್ರಾಮದ ಶಯನ್ ಸೋಮಣ್ಣ 9ನೇ ಗ್ರೆನೇಡಿಯರ್ ರೆಜಿಮೆಂಟ್ಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ನಾಪೋಕ್ಲುವಿನ ಸೆಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಹಾಗೂ ಜವಾಹರ್ ನವೋದಯ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕೂಡಿಗೆ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಮೂರು ವರ್ಷ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ, ಜವಾಹರ್ ನೆಹರೂ ಯೂನಿವರ್ಸಿಟಿ ದೆಹಲಿಯ ಬಿಎಸ್ಸಿ (ಸಿಎಸ್) ಪದವಿ ಪಡೆದಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬೆಟಾಲಿಯನ್ ಕ್ಯಾಪ್ಟನ್ ಹಾಗೂ ಅಕಾಡೆಮಿಕ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಇವರು ಒಂದು ವರ್ಷ ತರಬೇತಿ ಪಡೆದಿದ್ದಾರೆ. ಇವರು ಮಾರ್ಚಂಡ ವಿಜಯ್ ನಂಜಪ್ಪ ಮತ್ತು ಮಾರ್ಚಂಡ ಚಿತ್ರ ದಂಪತಿಗಳ ಪುತ್ರ.