ನ್ಯೂಸ್ ನಾಟೌಟ್ : ಜಗತ್ತಿನಲ್ಲಿ ನೂರಾರು ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಅಂತಹ ಘಟನೆಗೆ ಮತ್ತೊಂದು ಘಟನೆಯೂ ಈಗ ಸೇರಿಕೊಂಡಿದೆ. ಇಲೊಬ್ಬ ಅಪ್ಪ ಸ್ವಂತ ಮಗನನ್ನೇ ಕಿಡ್ನಾಪ್ ಮಾಡಿ ಹೈಡ್ರಾಮಾ ಮಾಡಿದ್ದಾನೆ. ಬೆಂಗಳೂರಿನಲ್ಲಿಯೇ ಈ ಘಟನೆ ನಡೆದಿದೆ. ಸೀನಿಮಿಯ ರೀತಿಯಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರಿನ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಮೃತಹಳ್ಳಿ ನಿವಾಸಿ ಸೆಲ್ವಿಯಾ (36 ) ಎಂಬುವವರ ಆರು ವರ್ಷದ ಮಗು ಅಪಹರಣವಾಗಿದೆ. ಈ ಮಗುವಿನ ತಂದೆ ಹರಿಕೃಷ್ಣ (44 ) ಎಂಬಾತನೇ ಮಗುವನ್ನು ಅಪಹರಣ ಮಾಡಿದ್ದಾನೆ. ಸೆಲ್ವಿಯಾ ದ್ವಿಚಕ್ರ ವಾಹನಕ್ಕೆ ಆಟೋ ರಿಕ್ಷಾದಿಂದ ಗುದ್ದಿ ಅಪಘಾತ ಮಾಡಿ ಹೈಡ್ರಾಮಾ ಸೃಷ್ಟಿಸಿ ಮಗುವನ್ನು ಕಿಡ್ನಾಪ್ ಮಾಡಲಾಗಿದೆ. ಈ ಸಂಬಂಧ ಕಿಡ್ನಾಪ್ ಗೆ ಸಹಕಾರ ನೀಡಿದ ಆಟೋ ಚಾಲಕನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಅಪ್ಪ ತಲೆ ಮರೆಸಿಕೊಂಡಿದ್ದು ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.