ನ್ಯೂಸ್ ನಾಟೌಟ್ : ಜೂ. 1 ರಂದು ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ಆಲಪುಳ – ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ (16307) ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಗಾಳದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಸ್ಥಳದ ಪಕ್ಕದ ಬಿಪಿಸಿಎಲ್ ದಾಸ್ತಾನು ಕೇಂದ್ರದ ಸಿಸಿಟಿವಿಯಲ್ಲಿ ಈತ ಬೆಕ್ಕಿ ಹಚ್ಚಿದ್ದು ಪತ್ತೆಯಾಗಿದೆ. ಆರೋಪಿಯನ್ನು ಬಂಗಾಳದ ನಿವಾಸಿ ಪುಸರಣ್ ಜಿತ್ ಸಿಕ್ದರ್ (40ವ) ಎಂದು ಗುರುತಿಸಲಾಗಿದೆ. ಬಂಗಾಳ ಡಿವೈಎಸ್ಪಿ ನೀರಜ್ ಗುಪ್ತ , ಕೇರಳ ಡಿವೈಎಸ್ಪಿ ಮ್ಯಾಥ್ಯೂ ರಾಜ್ ಕಲ್ಲಕಾಟ್ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಹೆಚ್ಚಿನ ವಿವರಗಳಿಗೆ ಸಮಗ್ರ ವಿಚಾರಣೆ ನಡೆಸುತ್ತಿದ್ದಾರೆ.