ನ್ಯೂಸ್ ನಾಟೌಟ್ : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸೋಮವಾರ ಜೂ. 26 ರಂದು ತಾಲೂಕು ಆಡಳಿತ ಸೌಧ ಹೆಬ್ರಿಯಲ್ಲಿ ಸಾರ್ವಜನಿಕರ ಭೇಟಿ ಮಾಡಿ ಅಹವಾಲು ಸ್ವೀಕಾರ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ, ಮಳೆ ಹಾನಿ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣೆಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ತಾಲೂಕು ಆಡಳಿತ ಸೌಧ, ಹೆಬ್ರಿ ಇಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕರ ಕಛೇರಿ ಸಿಬ್ಬಂದಿ ನ್ಯೂಸ್ ನಾಟೌಟ್ಗೆ ತಿಳಿಸಿದ್ದಾರೆ.