ನ್ಯೂಸ್ ನಾಟೌಟ್ : ಅಕ್ರಮ ಗೋಸಾಗಾಟ ಅರೋಪದಲ್ಲಿ ಬೆಳ್ಳಾರೆ ಪೊಲೀಸರು ಇಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.ಘಟನೆಗೆ ಸಂಬಂಧಿಸಿ ಮತ್ತಿಬ್ಬರು ಪರಾರಿಯಾಗಿದ್ದು,ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮೂರು ಗಂಡು ಕರುಗಳನ್ನು ಹಾಗೂ ಆ್ಯಕ್ಟಿವಾ ಸ್ಕೂಟರ್, ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.ಬೆಳ್ಳಾರೆಯ ಕೊಡಿಯಾಲ ಗ್ರಾಮದ ಮೂವಪ್ಪೆ ಎಂಬಲ್ಲಿ ಈ ಘಟನೆ ವರದಿಯಾಗಿದ್ದು,ಜೂ.18ರಂದು ಬೆಳ್ಳಾರೆ ಪೊಲೀಸ್ ಠಾಣಾ ಪಿಎಸ್ಐ ಸುಹಾಸ್ ಆರ್ ಹಾಗೂ ಸಿಬ್ಬಂದಿ ಕರ್ತವ್ಯ ದಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಪರವಾನಿಗೆ ಹೊಂದದ ಪಿಕಪ್ ವಾಹನದಲ್ಲಿ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಅಕ್ರಮ ಗೋಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಸಂದರ್ಭ 3 ಗಂಡು ಕರುಗಳನ್ನು ಹಾಗೂ ಅಕ್ರಮ ಸಾಗಾಟಕ್ಕೆ ಬಳಸಿದ ಹೊಂಡಾ ಆಕ್ಟಿವಾ ಸ್ಕೂಟರ್ ವಾಹನ ಮತ್ತು ಪಿಕಪ್ ವಾಹನ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳಾದ ಇಸುಬು, ಹುಸೈನ್ ಎಂಬವರನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳಾದ ಕೃಷ್ಣಪ್ಪ ಮತ್ತು ಆಲಿ ಕೋನಡ್ಕ ಪರಾರಿಯಾಗಿದ್ದು, ಅವರ ವಿರುದ್ದ ಪೊಲೀಸರು ಕೇಸ್ ದಾಖಲಿಸಿ ಕೊಂಡಿದ್ದಾರೆ.ವಿಚಾರಣೆ ಬಳಿಕ ಇಸುಬು ಮನೆಯಲ್ಲಿದ್ದ ನಾಲ್ಕು ಅಕ್ರಮ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಕಾರ್ಯಾಚರಣೆಯಲ್ಲಿ ಬೆಳ್ಳಾರೆ ಪಿಎಸ್ಐ ಸುಹಾಸ್ ಹಾಗೂ ಸಿಬ್ಬಂದಿಗಳಾದ ಶ್ರೀಶೈಲ, ಮಂಜುನಾಥ್, ಸುಭಾಷ್ ಕಿತ್ತೂರ್, ಬಸವರಾಜ್ ಭಾಗವಹಿಸಿದ್ದರು.