ನ್ಯೂಸ್ ನಾಟೌಟ್ : ಪತ್ನಿಯು ಸರಿಯಾಗಿ ಲೈಂಗಿಕ ಕ್ರಿಯೆಗೆ ಸಹಕರಿಸುತ್ತಿಲ್ಲವೆಂದು ಪತಿಯೊಬ್ಬ ಪತ್ನಿಯ ಜನನಾಂಗಕ್ಕೆ 6 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣವೊಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.
ಪತಿ ಅಯ್ಯಪ್ಪ (35 ) ಎಂಬಾತ ಈ ಕೃತ್ಯ ಎಸಗಿದವನು. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಯ್ಯಪ್ಪ ಹನ್ನೆರಡು ವರ್ಷಗಳ ಹಿಂದೆ ನಾಗರತ್ನ ಎಂಬಾಕೆಯನ್ನು ವಿವಾಹವಾಗಿದ್ದ. ಇಬ್ಬರಿಗೆ ಒಂದು ಹೆಣ್ಣು ಹಾಗೂ ಗಂಡು ಮಗು ಇದೆ. ನಾಗರತ್ನ ಇತ್ತೀಚೆಗೆ ಅಯ್ಯಪ್ಪನಿಂದ ದೂರವಿದ್ದಳು, ಪತಿ ಲೈಂಗಿಕ ಕ್ರಿಯೆ ಆಸಕ್ತಿ ತೋರಿದಾಗಲೆಲ್ಲವೂ ಆಕೆ ದೂರ ಹೋಗಿದ್ದಳು. ಈಕೆಗೆ ಬೇರೆ ಸಂಬಂಧವಿದೆ ಎಂದು ಅನುಮಾನಗೊಂಡ ಪತಿ ಅಯ್ಯಪ್ಪ ಆಕೆಯನ್ನು ಪ್ರಶ್ನಿಸಿದ್ದಾನೆ. ಭಾನುವಾರ ಇಬ್ಬರ ನಡುವೆ ತೀವ್ರ ಜಗಳವಾಗಿದೆ. ಈ ವೇಳೆ ಸಿಟ್ಟಿನಿಂದ ಪತ್ನಿಯ ಗುಪ್ತಾಂಗಕ್ಕೆ ಆರು ಸಲ ಅಯ್ಯಪ್ಪ ಚಾಕುವಿನಿಂದ ಚುಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ನಾಗರತ್ನ ಸಾವಿಗೀಡಾಗಿದ್ದಾಳೆ ಎಂದು ತಿಳಿದು ಬಂದಿದೆ.