ನ್ಯೂಸ್ ನಾಟೌಟ್ : ಗೂನಡ್ಕದ ತೆಕ್ಕಿಲ್ ಮಾದರಿ ಶಾಲೆಯಲ್ಲಿ ಹೊಸದಾಗಿ ಆರಂಭವಾಗಿರುವ ಅಲ್ -ಬಿರ್ ಇಸ್ಲಾಮಿಕ್ ಪ್ರೀ ಸ್ಕೂಲ್ನ ನೂತನ ಕೊಠಡಿಗಳನ್ನು ಭಾನುವಾರ ಉದ್ಘಾಟನೆಗೊಂಡಿತು.
ತೆಕ್ಕಿಲ್ ಮಾದರಿ ಶಾಲೆಯ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ , ಕಲ್ಲುಗುಂಡಿ ಮಸೀದಿ ಖತೀಬರಾದ ನಈಂ ಪೈಝಿ ,ಜಲೀಲ್ ಸಖಾಫಿ ದೇವರಕೊಲ್ಲಿ ಉದ್ಘಾಟಿಸಿದರು. ಪ್ರೀ ಸ್ಕೂಲ್ ತರಗತಿ 2ನೇ ಕೊಠಡಿಯನ್ನು ಸಂಪಾಜೆ ಗ್ರಾ.ಪಂ ಅಧ್ಯಕ್ಷ ಜಿ.ಕೆ ಹಮೀದ್ ಉದ್ಘಾಟಿಸಿದರು. ಬದ್ರಿಯಾ ಜುಮ್ಮಾ ಮಸ್ಜೀದ್ ಅರಂತೋಡು ಖತೀಬ ಇಸಾಕ್ ಬಾಖವಿ ಪೇರಡ್ಕ ಜುಮ್ಮಾ ಮಸೀದಿ ಖತೀಬರಾದ ರಿಯಾಜ್ ಪೈಝಿ ದುವಾಶಿರ್ವಚನ ನೀಡಿದರು. ಸುಳ್ಯ ತಾಲೂಕಿನಲ್ಲೇ ಪ್ರಥಮ ಬಾರಿಗೆ ಉನ್ನತ ಶಿಕ್ಷಣ ನೀಡಲು ಅಲ್ – ಬಿರ್ ಪ್ರೀ ಸ್ಕೂಲ್ ಸ್ಥಾಪಿಸಿದೆ. ಅಂತಾರಾಷ್ಟ್ರೀಯಮಟ್ಟದ ಶಿಕ್ಷಣ ವ್ಯವಸ್ಥೆ ಇದಾಗಿದೆ. ಎಲ್ಕೆಜಿ ಮತ್ತು ಯುಕೆಜಿ ತರಗತಿಗಳು ನಡೆಯಲಿದೆ.
ಈ ವರ್ಷದಿಂದ ಎಲ್ಕೆಜಿ ತರಗತಿಗಳು ನಡೆಯಲಿದೆ. 24 ಮಕ್ಕಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಮಕ್ಕಳಿಗೆ ಪಠ್ಯ ಪುಸ್ತಕದ ಅರಿವು ಅಲ್ಲದೆ ಮನೋರಂಜನೆ, ಸ್ಮಾರ್ಟ್ ಟಿ.ವಿ ಮೂಲಕ ಹೊರ ಪ್ರಪಂಚದ ಅರಿವು , ಕ್ರೀಡಾಸಾಮಾಗ್ರಿ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ ತರಗತಿ ಒಳಗೆ ವರ್ಣ ಚಿತ್ತರಗಳು ಹಾಗೂ ಅಕ್ಷರ ಮಾಲೆಗಳ ಹೊಸ ವಿನ್ಯಾಸದ ಚಿತ್ರಗಳು ಆಕರ್ಷಿತವಾಗಿದೆ. ಇಂತಹ ಶಿಕ್ಷಣ ಮಕ್ಕಳಿಗೆ ಉತ್ತೇಜನ ನೀಡಲಿದೆ ಎಂದು ಶಾಲೆಯ ಅಧ್ಯಕ್ಷ ಉನೈಸ್ ಪೆರಾಜೆ ತಿಳಿಸಿದರು.
ಕಲ್ಲುಗುಂಡಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಹೆಚ್ ಎ, ಪೇರಡ್ಕ ಜುಮ್ಮಾ ಮಸೀದಿ ಅಧ್ಯಕ್ಷ ಎಸ್ ಆಲಿ ಹಾಜಿ,ಸಂಪಾಜೆ ಬದ್ರಿಯಾ ಜುಮ್ಮಾ ಅಧ್ಯಕ್ಷ ತಾಜ್ ಮಹಮ್ಮದ್, ಪೆರಾಜೆ ಜುಮ್ಮಾ ಮಸೀದಿ ಅಧ್ಯಕ್ಷ ಶಾಹೀದ್ ಎಂ ಐ, ಸಂಟ್ಯಾರ್ ಪ್ರತಿಷ್ಠಾನ ಅಧ್ಯಕ್ಷ ಅಶ್ರಫ್ ಹೆಚ್ ಎ, ತೆಕ್ಕಿಲ್ ಮಾದರಿ ಶಾಲೆ ಮುಖ್ಯೋಪಾಧ್ಯಾಯ ಸಂಪತ್ ಕುಮಾರ್, ಗಾಂಧಿನಗರ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ, ಸುಳ್ಯ ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಎಸ್ ಎ ಹಮೀದ್ ಹಾಜಿ ಸುಳ್ಯ, ಸುಳ್ಯ ಉದ್ಯಮಿ ಅಬ್ದುಲ್ಲ್ ಖಾದರ್ ಹಾಜಿ ಅಝಾದ್,ತೆಕ್ಕಿಲ್ ಪ್ರತಿಷ್ಠಾನ ಸಂಚಾಲಕ ಜಾವೇದ್ ಟಿ.ಎಂ,ಸಾಜಿ ಐ ಜಿ,ಸಾದಿಕ್ ಕುಂಭಕ್ಕೊಡು, ನಿಝಾಂ ಕಡೆಪಾಲ,ಝಾಕೀರ್ ಪೇರಡ್ಕ, ಶಿಹಾಬ್ ಪೆರಾಜೆ,ಮಹಮ್ಮದ್ ಇರ್ಪಾನ್ ಪೇರಡ್ಕ, ಪಿ ಎ ಉಮ್ಮರ್ ಹಾಜಿ ಪೇರಡ್ಕ, ಅಬ್ದುಲ್ ಖಾದರ್ ಹಾಜಿ ಪಟೇಲ್, ಬದ್ರುದ್ದೀನ್ ಪಟೇಲ್,ಸಿದ್ದೀಕ್ ಕೊಕ್ಕೊ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಇರ್ಫಾನ್ ಪೇರಡ್ಕ ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು. ಗ್ರಾಮೀಣಾಭಿವೃದ್ಧಿಯ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿದರು.