ನ್ಯೂಸ್ ನಾಟೌಟ್ : ಗೂಗಲ್ ಪೇ ಹೊಸ ಅಪ್ಡೇಟ್ ಒಂದನ್ನು ಹೊರತಂದಿದೆ.ಹೌದು,ಈ ಬಗ್ಗೆ ಕಂಪನಿ ಬುಧವಾರ ತಿಳಿಸಿದ್ದು,ಈ ಸೇವೆಯು ಗೂಗಲ್ ಪೇ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದೆ.
ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಆ್ಯಪ್ ಅಲ್ಲಿ ಯುಪಿಐ ಸೇವೆಯನ್ನು ಸಕ್ರಿಯಗೊಳಿಸಲು ಇರುವ ವಿಧಾನ ಇದಾಗಿದೆ.ಇಲ್ಲಿ ಡೆಬಿಟ್ ಕಾರ್ಡ್ ಇಲ್ಲದೆಯೇ ತಮ್ಮ ಯುಪಿಐ ಪಿನ್ ಅನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಆದರೆ ಮೊಬೈಲ್ ಫೋನ್ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಪರಸ್ಪರ ಲಿಂಕ್ ಮಾಡಿದರೆ ಮಾತ್ರ ಈ ಎಲ್ಲಾ ವ್ಯವಸ್ಥೆಗಳನ್ನು ಪಡೆಯಬಹುದಾಗಿದೆ.
ಡೆಬಿಟ್ ಕಾರ್ಡ್ ಮತ್ತು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಗೂಗಲ್ ಪೇ ಖಾತೆ ಸಕ್ರಿಯಗೊಳಿಸುವ ಆಯ್ಕೆಯನ್ನು ತೋರಿಸುತ್ತದೆ. ಬಳಕೆದಾರರು ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. “ಗೂಗಲ್ ಪೇನಲ್ಲಿ ಆಧಾರ್ ಆಧಾರಿತ ಒಟಿಪಿ ದೃಢೀಕರಣವನ್ನು ಬಳಸಿಕೊಂಡು ಯುಪಿಐ ಸಕ್ರಿಯಗೊಳಿಸುವಿಕೆಯನ್ನು ಘೋಷಿಸಲು ನಾವು ಉತ್ಸಕರಾಗಿದ್ದೇವೆ.ಇದು ನಮ್ಮ ಬಳಕೆದಾರರಿಗೆ ಸರಳತೆ ಮತ್ತು ಅನುಕೂಲವನ್ನು ತರುತ್ತದೆ. ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ವೈಶಿಷ್ಟ್ಯವು ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ “ಎಂದು ಗೂಗಲ್ ಸಂಸ್ಥೆಯ ಉತ್ಪನ್ನ ನಿರ್ವಹಣೆಯ ನಿರ್ದೇಶಕ ಶರತ್ ಬುಲುಸು ತಿಳಿಸಿದ್ದಾರೆ.