ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ಆದರೆ ಫ್ರೀ ಪ್ರಯಾಣ ಹೇಳಿಕೊಂಡು ಪ್ರಯಾಣಿಸಲು ಬಸ್ ಗಳೇ ಇಲ್ಲವಲ್ಲ ಎಂದು ಸರ್ಕಾರದ ವಿರುದ್ಧ ವಹಿಳಾಮಣಿಗಳು ಕಿಡಿಕಾರಿರುವ ಘಟನೆ ವರದಿಯಾಗಿದೆ.
ಫ್ರೀ ಪ್ರಯಾಣ ಅವಕಾಶ ನೀಡಿದ ಮೊದಲ ದಿನವೇ ಬಸ್ಗಳ ಕೊರತೆ ಎದುರಾಗಿದೆ. ಮಂಡ್ಯ ಸೇರಿದಂತೆ ಬೆಂಗಳೂರಿನಲ್ಲಿ ಈ ಘಟನೆ ವರದಿಯಾಗಿದ್ದು,ಮಹಿಳೆಯರು ಬಸ್ ಗಾಗಿ ಕಾದು ಕಾದು ಸುಸ್ತಾಗಿದ್ದಾರೆ.ಮಂಡ್ಯದ ಮದ್ದೂರಿನಲ್ಲಿ ಬೆಂಗಳೂರು, ತುಮಕೂರು ಕಡೆ ತೆರಳಲು ಬಸ್ಗಾಗಿ ಕಾದು ಸುಸ್ತಾದ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಶೇಷ ಎಂದರೆ ಮಹಿಳಾ ಪ್ರಯಾಣಿಕರಿಗೆ ಉಚಿತ ಘೋಷಣೆ ಮಾಡಿದ ಮೊದಲ ದಿನವೇ ಮಹಿಳೆಯರು ಬಸ್ ಇಲ್ಲದೇ ಪರದಾಟ ನಡೆಸಿದ್ದು ವಿಪರ್ಯಾಸ!.
ಹೆಣ್ಣು ಮಕ್ಕಳಿಗೆ ಬಸ್ ಯಾನ ಫ್ರೀ ಅಂತ ಘೋಷಣೆ ಮಾಡಿ ಸಂಜೆ ನಾಲ್ಕು ಗಂಟೆಯಿಂದ ಕೇವಲ ಬೆರಳೆಣಿಕೆಯಷ್ಟು ಬಸ್ಗಳನ್ನು ಬಿಟ್ಟಿದ್ದಾರೆ. ಮಹಿಳೆಯರಿಗೆ ಫ್ರೀ ಅಂತ ಹೇಳಿ ಈ ರೀತಿ ಮಾಡೋದು ಏನಕ್ಕೆ? ವಾರಾಂತ್ಯದ ವೇಳೆ ಮಕ್ಕಳನ್ನು ಕರೆದುಕೊಂಡು ಹೋಗುವ ಇಂತಹ ಸಮಯದಲ್ಲಿ ನಾವು ಏನು ಮಾಡಬೇಕು ಎಂದು ಮಹಿಳಾ ಪ್ರಯಾಣಿಕರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ.ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲದ ಈ ಸಂದರ್ಭದಲ್ಲಿ ನಾವು ನಗರದಿಂದ ಹಳ್ಳಿಗೆ ಹೋಗಬೇಕು. ಸಮಯಕ್ಕೆ ಸರಿಯಾಗಿ ಬಸ್ ಬಂದಿಲ್ಲಾಂದ್ರೆ ಕತ್ತಲಾಗೋ ಮುಂಚೆ ಮನೆಗೆ ತಲುಪಲು ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.