ನ್ಯೂಸ್ ನಾಟೌಟ್: 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ 12 ವರ್ಷದ ಸಹೋದರನ್ನೇ ಕೊಲೆಗೈದ ಘಟನೆ ಹರಿಯಾಣದಲ್ಲಿ ನಡೆದಿದೆ. ಅಪ್ಪ- ಅಮ್ಮ ತನಗಿಂತ ತನ್ನ ತಮ್ಮನನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂದು ನೊಂದ ಹುಡುಗಿ ಈ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಈ ಘಟನೆ ಹರಿಯಾಣದ ಬಲ್ಲಭಗಡ ಎಂಬಲ್ಲಿ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇತ್ತ ಕೆಲಸ ಮುಗಿಸಿಕೊಂಡು ಹೆತ್ತವರು ಮನೆಗೆ ವಾಪಸ್ ಆದಾಗ ಮಗ ಕಾಣಲಿಲ್ಲ. ಹೀಗಾಗಿ ಮನೆಯೆಲ್ಲಾ ಹುಡುಕಾಡಿದ್ದಾರೆ. ಈ ವೇಳೆ ಬಾಲಕ ಕೋಣೆಯಲ್ಲಿ ಕಂಬಳಿ ಹೊದ್ದು ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಕೂಡಲೇ ಆತನ ಬಳಿ ತೆರಳಿ ಎಬ್ಬಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ವೇಳೆ ಕಂಬಳಿ ತೆರೆದು ನೋಡಿದಾಗ ಕತ್ತು ಹಿಸುಕಿ ಕೊಲೆ ಮಾಡಿರುವುದು ಬಯಲಾಗಿದೆ. ಘಟನೆ ವೇಳೆ ಬಾಲಕಿ ಮಾತ್ರ ಮನೆಯಲ್ಲಿದ್ದಳು ಎನ್ನಲಾಗಿದೆ.
ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನಿಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಇಬ್ಬರು ಮಕ್ಕಳು ಉತ್ತಪ್ರದೇಶದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಶಾಲೆಗೆ ರಜೆ ಇದ್ದ ಕಾರಣ ಇತ್ತೀಚೆಗೆ ಇಬ್ಬರು ಕೂಡ ಅಪ್ಪ-ಅಮ್ಮನ ಜೊತೆ ಇರಲು ಬಂದಿದ್ದಾರೆ. ಬಾಲಕಿ ತನಗಿಂತ ತನ್ನ ತಮ್ಮನನ್ನು ಹೆತ್ತವರು ಹೆಚ್ಚು ಪ್ರೀತಿಸುತ್ತಾರೆ ಎಂದು ತಿಳಿದು ಬಾಲಕನನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಹೆತ್ತವರು ಬಾಲಕನಿಗೆ ಇತ್ತೀಚೆಗೆ ಮೊಬೈಲ್ ಫೋನ್ ಕೊಡಿಸಿದ್ದರು. ಅಂತೆಯೇ ಮಂಗಳವಾರ ಅಪ್ಪ-ಅಮ್ಮ ಕೆಲಸಕ್ಕೆ ಹೋದ ಬಳಿಕ ಆತ ತನ್ನ ಮೊಬೈಲ್ ನಲ್ಲಿ ಗೇನ್ಸ್ ಆಡುತ್ತಿದ್ದ ಇದ್ದ. ಈ ವೇಳೆ ಬಾಲಕಿ ತನಗೊಮ್ಮೆ ಮೊಬೈಲ್ ಕೊಡುವಂತೆ ಕೇಳಿದ್ದಾಳೆ. ಈ ವೇಳೆ ಆತ ಮೊಬೈಲ್ ಕೊಡಲು ನಿರಾಕರಿಸಿದ್ದಾನೆ. ನಿನ್ನನ್ನು ಅಪ್ಪ-ಅಮ್ಮ ಹೆಚ್ಚು ಪ್ರೀತಿಸ್ತಾರೆ ಎಂದು ಹೇಳಿ ಕೋಪಗೊಂಡ ಬಾಲಕಿ ಆತನನನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ. ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
- +91 73497 60202
- [email protected]
- November 22, 2024 9:14 AM