ನ್ಯೂಸ್ ನಾಟೌಟ್: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಧರಿಸಿದ ಕುಟುಂಬವೊಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದೆ. ಇವರು ಮೈ ಮೇಲೆ ಧರಿಸಿದ್ದ ಚಿನ್ನಾಭರಣಗಳನ್ನು ನೋಡಿದ ಕ್ಷೇತ್ರದ ಭಕ್ತರು ಆಶ್ಚರ್ಯಗೊಂಡಿದ್ದಾರೆ.
ಜೂನ್ ಮೂರರಂದು ಮಹಾರಾಷ್ಟ್ರದ ರತ್ಲಾಮ್ನಿಂದ ತಿರುಪತಿ ದೇವರ ದರ್ಶನಕ್ಕೆ ಸುಭಾಷ್ ಚಂದ್ರ ಮತ್ತು ಸೋನಿ ಕುಟುಂಬ ಬಂದಿತ್ತು. ಆದರೆ ಇವರು ಮೈ ಮೇಲೆ ಧರಿಸಿದ್ದ ಚಿನ್ನದ ಆಭರಣಗಳಲ್ಲಿ ದೊಡ್ಡ ಬಿಲ್ಲುಗಳೊಂದಿಗೆ ವೆಂಕಟೇಶ್ವರ ಮತ್ತು ಪದ್ಮಾವತಿ ದೇವಿಯ ವಿಗ್ರಹಗಳಿದ್ದು, ತಿರುಮಲ ಬೆಟ್ಟದಲ್ಲಿದ್ದ ಭಕ್ತರ ಆಕರ್ಷಣೆಗೆ ಕಾರಣವಾಗಿತ್ತು.
ಮೈತುಂಬಾ ಬೆಲೆ ಬಾಳುವ ಬಂಗಾರದ ಒಡವೆಗಳಿಂದ ಮಿಂಚುತ್ತಿದ್ದ ಕುಟುಂಬವನ್ನು ಭಕ್ತರು ಕುತೂಲಹದಿಂದ ವೀಕ್ಷಿಸುತ್ತಿದ್ದರು. ಕೆಲವರು ತಮ್ಮ ಮೊಬೈಲ್ನಲ್ಲಿ ಫೋಟೋ ಸೆರೆ ಹಿಡಿದಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಪ್ರತಿ ವರ್ಷ ವೆಂಕಟೇಶ್ವರನ ವಿಗ್ರಹಗಳಿರುವ ಚಿನ್ನದ ಆಭರಣ ಧರಿಸಿ ತಿರುಮಲಕ್ಕೆ ಬರುವುದು ವಾಡಿಕೆ ಈ ಕುಟುಂಬದ ಸಂಪ್ರದಾಯ ಎಂದು ಈ ಕುಟುಂಬದ ಸದಸ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೂರ್ವಜರ ಕಾಲದಿಂದಲೂ ತಿರುಪತಿ ವೆಂಕಟೇಶ್ವರನನ್ನು ಮನೆ ದೇವರಾಗಿ ಪೂಜಿಸುತ್ತಾ ಬಂದಿದ್ದೇವೆ. ವೆಂಕಟೇಶ್ವರ ಮತ್ತು ಪದ್ಮಾವತಿ ದೇವಿಯ ವಿಗ್ರಹಗಳಿಂದ ತಯಾರಿಸಿದ ಚಿನ್ನಾಭರಣ ಧರಿಸಿ ತಿರುಮಲ ದೇವರ ದರ್ಶನ ಮಾಡುವುದು ಪೂರ್ವಜರಿಂದ ಬಂದ ಸಂಪ್ರದಾಯ ಎಂದಿದ್ದಾರೆ.