ನ್ಯೂಸ್ ನಾಟೌಟ್ ಪುತ್ತೂರು: ಜಾತ್ರೆಗಳಲ್ಲಿ ಭಾರಿ ಮೊತ್ತಕ್ಕೆ ಅಂಗಡಿಗಳನ್ನು ಏಲಂ ಮಾಡಿ ಬಡ ವ್ಯಾಪಾರಸ್ಥರಿಗೆ ಹಾಗೂ ಜಾತ್ರೆಗಳಿಗೆ ಆಗಮಿಸುವ ಭಕ್ತರಿಗೆ ಆರ್ಥಿಕ ನಷ್ಟ ತಪ್ಪಿಸಲು, ಏಲಂ ಮೊತ್ತವನ್ನು ಕಡಿಮೆ ಮಾಡಿಸಲು ವ್ಯಾಪಾರಿಗಳನ್ನು ಒಟ್ಟುಗೂಡಿಸಲು ಹಿಂದೂ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬಂದಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ‘ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ನೋಂದಾಯಿತಗೊಂಡಿದ್ದು, ಇದರ ನೋಂದಣಿ ಪತ್ರವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರಿನ ಪುತ್ತಿಲ ಪರಿವಾರದ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರ ಬೃಹತ್ ಸಮಾವೇಶ ಏರ್ಪಡಿಸಿ ಸರ್ಕಾರಕ್ಕೆ ಹಕ್ಕೋತ್ತಾಯ ನೀಡಲು ನಿರ್ಣಯಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಗಣೇಶ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಣೇಶ್ , ಖಜಾಂಚಿ ಗೋವಿಂದದಾಸ್, ಪೃಥ್ವಿರಾಜ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.