ನ್ಯೂಸ್ ನಾಟೌಟ್ : ಆನ್ಲೈನ್ ಮಾರುಕಟ್ಟೆಯಂತೂ ಕೆಲವೇ ವರ್ಷಗಳಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದನ್ನೇ ಲಾಭವಾಗಿಟ್ಟುಕೊಂಡು ಕೆಲ ವಂಚಕರು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ.
ಗ್ರಾಹಕರಿಗೆ ಇದನ್ನು ಪತ್ತೆಹಚ್ಚೋದೆ ಒಂದು ದೊಡ್ಡ ಸವಾಲಾಗಿದೆ. ಅಸಲಿ ಮತ್ತು ನಕಲಿ ಉತ್ಪನ್ನಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಅನೇಕ ಜನರಿಗೆ ಸವಾಲಿನ ಕೆಲಸವಾಗಿದೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇದೀಗ ಟೆಕ್ ಕಂಪನಿಯೊಂದು ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. Alitheon ಎಂಬ ಅಮೇರಿಕನ್ ಕಂಪನಿಯು (FeaturePrint) ಫೀಚರ್ ಪ್ರಿಂಟ್ ಎಂಬ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಡಿವೈಸ್ ಕ್ಯಾಮೆರಾದ ಸಹಾಯದಿಂದ ನಕಲಿ ಉತ್ಪನ್ನಗಳನ್ನು ಕೃತಕ ಬುದ್ಧಿಮತ್ತೆ (AI) ಶಕ್ತಿಯನ್ನು ಬಳಸಿಕೊಂಡು ಗುರುತಿಸುತ್ತದೆ.
ಇನ್ನು ಫೀಚರ್ಪ್ರಿಂಟ್ ಅಪ್ಲಿಕೇಶನ್ ವಿಶೇಷ ಸೆನ್ಸಾರ್ಗಳು ಉತ್ಪನ್ನಗಳ ಮೇಲೆ ಹೊಲೊಗ್ರಾಮ್ಗಳು, ಬಾರ್ಕೋಡ್ಗಳು ಅಥವಾ ಸ್ಟಿಕ್ಕರ್ಗಳನ್ನು ಓದುವ ಅಗತ್ಯವಿಲ್ಲದೆಯೇ AI ತಂತ್ರಜ್ಞಾನದೊಂದಿಗೆ ನಕಲಿ ಉತ್ಪನ್ನಗಳನ್ನು ಪತ್ತೆ ಮಾಡುತ್ತದೆ. ಹಾನಿಗೊಳಗಾದ ಅಥವಾ ಯಾವುದೇ ಭಾಗಗಳನ್ನು ಕಳೆದುಕೊಂಡಿದ್ದರೆ ಸಹ ಇದು ಪತ್ತೆ ಮಾಡುತ್ತದೆ.
ನಕಲಿ ಉತ್ಪನ್ನಗಳ ಸಮಸ್ಯೆಯನ್ನು ಪರಿಹರಿಸಲು ಅಲಿಥಿಯಾನ್ ಈ ಫೀಚರ್ಪ್ರಿಂಟ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.
ಅದಕ್ಕಾಗಿ ಕಂಪನಿಗಳು ಈ ಪ್ಲಾಟ್ಫಾರ್ಮ್ನಲ್ಲಿ ಸೈನ್ ಅಪ್ ಮಾಡಬಹುದು ಮತ್ತು ತಮ್ಮ ಉತ್ಪನ್ನಗಳನ್ನು ಗುರುತಿಸಲು ಮತ್ತು ದೃಢೀಕರಿಸಲು ಅಪ್ಲಿಕೇಶನ್ನ ಫೀಚರ್ಸ್ಗಳನ್ನು ಬಳಸಬಹುದು ಎಂದಿದೆ.
ಇನ್ನು ಈ ನಕಲಿ ಉತ್ಪನ್ನಗಳ ಮಾರಾಟದಿಂದ ಕಂಪನಿಗಳ ಹಣಕಾಸಿನ ನಷ್ಟದ ಅಪಾಯವನ್ನು ಕಡಿಮೆ ಮಾಡಬಹುದು. ಆದ್ದರಿಂದ ಬಳಕೆದಾರರು ಯಾವುದೇ ಉತ್ಪನ್ನ ಖರೀದಿಸುವಾಗ ಒರಿಜಿನಲ್ ಯಾವುದು, ನಕಲಿ ಯಾವುದು ಎಂಬುದನ್ನು ತಿಳಿಯಬಹುದಾಗಿದೆ. ಈ ಆ್ಯಪ್ ಮೂಲಕ ಚಿನ್ನ ಅಥವಾ ಪುರಾತನ ಕೈಗಡಿಯಾರಗಳಂತಹ ಯಾವುದೇ ಉತ್ಪನ್ನವನ್ನು ಪತ್ತೆಹಚ್ಚಬಹುದು ಎಂದು ಕಂಪನಿ ತಿಳಿಸಿದೆ.