ನ್ಯೂಸ್ ನಾಟೌಟ್: ಉತ್ತರ ಕರ್ನಾಟಕ ಪ್ರಖ್ಯಾತ ದೂದ್ ನಾನಾ ದರ್ಗಾ, ಆ ದರ್ಗಾಕ್ಕೆ ಹಿಂದೂ ಮುಸ್ಲಿಂ ಎನ್ನದೆ ಎಲ್ಲಾ ಧರ್ಮೀಯರು ಆಗಮಿಸುತ್ತಾರೆ. ಅಷ್ಟೇ ಅಲ್ಲಾ ಈ ದರ್ಗಾಕ್ಕೆ ಕೋಟ್ಯಂತರ ರೂಪಾಯಿ ಆದಾಯ ಕೂಡಾ ಇದೆ. ಆದರೆ ಈ ದರ್ಗಾದ ಖರ್ಚು ವೆಚ್ಚ ಕೇಳಿದಕ್ಕೆ, ದರ್ಗಾದ ಕಮಿಟಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ದೂರು ದಾಖಲಾದೆ.
ಕಮಿಟಿ ಅಧ್ಯಕ್ಷ ಹಾಗೂ ಆತನ ಮಕ್ಕಳು ದರ್ಪ ಮೆರೆದಿದ್ದಾರೆ. ಸದ್ಯ ಆ ಸದಸ್ಯ ಜೀವ ಭಯದಿಂದ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದು, ಗದಗ ಜಿಲ್ಲೆಯ ಲಕ್ಷ್ಮೇಶ್ವರದ ದೂದ್ ನಾನಾ ದರ್ಗಾಕ್ಕೆ ಅವ್ಯವಹಾರದ ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಲೆಕ್ಕಪತ್ರ ಕೇಳಿದಕ್ಕೆ ಅಧ್ಯಕ್ಷ ಕುಟುಂಬದಿಂದ ಗೂಂಡಾವರ್ತನೆ ಆರೋಪ ಮಾಡಿದ್ದು, ದೂದ್ ನಾನಾ ದರ್ಗಾದಲ್ಲಿ ಗಲಾಟೆ, ಗದ್ದಲ ಜೋರಾಗಿದೆ. ಮತ್ತೊಂದೆಡೆ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಆತನನ್ನು ಫಿಯುಮುಲ್ಲಾ ಪಲ್ಲಿ ಎಂದು ಗುರುತಿಸಲಾಗಿದೆ. ಈತ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ನಿವಾಸಿ.. ಈತನಿಗೆ ದೂದ್ ನಾನಾ ದರ್ಗಾ ಕಮಿಟಿ ಅಧ್ಯಕ್ಷ ಹಾಗೂ ಆತನ ಮಕ್ಕಳು ಸೇರಿದಂತೆ 20 ಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಅಂದಹಾಗೇ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ದೂದ್ ನಾನಾ ದರ್ಗಾ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹಿಂದೂ ಮುಸ್ಲಿಂ ಎನ್ನದೆ, ಎಲ್ಲಾ ಧರ್ಮೀಯರು ಈ ದೂದ್ ನಾನಾ ದರ್ಗಾಕ್ಕೆ ಬರುತ್ತಾರೆ. ಪ್ರತಿ ತಿಂಗಳು ಲಕ್ಷಾಂತರ ಭಕ್ತರು ಈ ದರ್ಗಾಕ್ಕೆ ಬಂದು ಹೋಗುತ್ತಾರೆ. ಹೀಗಾಗಿ ಈ ದರ್ಗಾದಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ.
ದರ್ಗಾದ ಕಮಿಟಿ ಅಧ್ಯಕ್ಷ ಸುಲೇಮಾನ್ ಸಾಬ್ ಕಣಕೆ ಅವರ ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆ ನಡೆಯುತ್ತಿತ್ತು. ಈ ವೇಳೆ ಖರ್ಚು ವೆಚ್ಚದ ಕುರಿತು ಕಮಿಟಿ ಸದಸ್ಯ ಫಿಯುಮುಲ್ಲಾ ಲೆಕ್ಕವನ್ನು ಕೇಳಿದ್ದಾರೆ ಈ ಕಾರಣಕ್ಕೆ ದಾಳಿ ನಡೆದಿದೆ ಎನ್ನಲಾಗಿದೆ. ಇಷ್ಟಕ್ಕೆ ಅಧ್ಯಕ್ಷ ಸುಲೇಮಾನ್ ಸಿಟ್ಟಾಗಿ, ಏಕವಚನದಲ್ಲಿ ಮಾತನಾಡಿದ್ದಾರಂತೆ, ಆಗ ಗಾಯಾಳು ಫಿಯುಮುಲ್ಲಾ ಕೂಡಾ ಏಕವಚನದಲ್ಲಿಯೇ ಮಾತನಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಈಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ ಎಂದು ವರದಿ ತಿಳಿಸಿದೆ.