ನ್ಯೂಸ್ ನಾಟೌಟ್ : ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ ಕೇರಳ ಕೋರ್ಟ್ ಬರೋಬ್ಬರಿ 135 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ!.ಆರೋಪಿಯು ಎರಡು ವರ್ಷಗಳ ಹಿಂದೆ ತನ್ನ ಸೋದರ ಸಂಬಂಧಿ, ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ.
ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ (ಎಫ್ಟಿಎಸ್ಸಿ) ನ್ಯಾಯಾಧೀಶರಾದ ಸಜಿ ಕುಮಾರ್ ತೀರ್ಪು ಪ್ರಕಟಿಸಿದ್ದು,ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಐಪಿಸಿ, ಐಟಿ ಕಾಯ್ದೆ, ಬಾಲಾಪರಾಧಿ ನ್ಯಾಯಾಂಗ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ಅಡಿಯಲ್ಲಿ ಆರೋಪಿಗೆ 135 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.ಆರೋಪಿಯು ಬಾಲಕಿಯನ್ನು ಪ್ರತಿದಿನ ಶಾಲೆಗೆ ಕರೆದೊಯ್ದು ತನ್ನ ಅಜ್ಜಿಯ ಮನೆಗೆ ವಾಪಸ್ ಬಿಡುತ್ತಿದ್ದನು. ಈ ವೇಳೆ ಆರೋಪಿ ಬಾಲಕಿಯನ್ನು ಪದೇ ಪದೇ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ.ನ್ಯಾಯಾಲಯವು ಆರೋಪಿಗೆ ಗರಿಷ್ಠ ಜೈಲು ಶಿಕ್ಷೆಯ ಜೊತೆಗೆ 5.1 ಲಕ್ಷ ರೂ. ದಂಡ ವಿಧಿಸಿದ್ದು. ಸಂತ್ರಸ್ತೆಗೆ 4 ಲಕ್ಷ ರೂ. ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಸೂಚಿಸಿದೆ.
Follow our Social media pages:
FB PAGE : https://www.facebook.com/NewsNotOut2023
YouTube : https://www.youtube.com/@newsnotout8209
Insta : https://www.instagram.com/newsnotout/
Tweet : https://twitter.com/News_Not_Out