ನ್ಯೂಸ್ ನಾಟೌಟ್ : ಚಟ್ಟದ ಮೇಲೆ ಶವವೂ ಮಲಸಿ, ಸಂಬಂಧಿಕರು, ನೆರೆಹೊರೆಯವರೆಲ್ಲಾ ಸೇರಿದ್ದರು. ಇನ್ನೆನ್ನೂ ಅಂತ್ಯ ಸಂಸ್ಕಾರ ಮುಗಿಸಬೇಕು ಅನ್ನುವಷ್ಟರಲ್ಲಿ ಸತ್ತಿದ್ದ ಯುವಕನ ಕೈಕಾಲು ಅಲುಗಾಡಲು ಆರಂಭಿಸಿದೆ ಎಲ್ಲರನ್ನೂ ಚಕಿತರನ್ನಾಗಿಸಿದೆ.
ಮಧ್ಯಪ್ರದೇಶದ ಮೊರೆನಾದಲ್ಲಿ ಅಂತಿಮ ವಿಧಿವಿಧಾನಗಳಿಗೆ ಕೆಲವೇ ಕೆಲವು ನಿಮಿಷ ಬಾಕಿ ಇರುವಾಗ ವ್ಯಕ್ತಿಯೊಬ್ಬ ಚಿತಾಗಾರದಲ್ಲಿ ಎಚ್ಚರಗೊಂಡಿದ್ದಾನೆ. ತಕ್ಷಣವೇ ಬೆಚ್ಚಿಬಿದ್ದ ಸಂಬಂಧಿಕರಲ್ಲಿ ಕೆಲವರು ಓಡಿ ಹೋಗಿದ್ದಾರೆ. ಇನ್ನೂ ಕೆಲವರು ಸತ್ತಿದ್ದಾನೆ ಎಂದು ನಂಬಿದ್ದವನ ಉಸಿರಾಟ ಕಂಡು ಬೆಚ್ಚಿ ಬಿದ್ದಿದ್ದಾರೆ, ಮೂಗು, ಬಾಯಿಯ ಮೇಲೆ ಬೆರಳುಗಳನ್ನ ಇಟ್ಟು ವ್ಯಕ್ತಿಯ ಉಸಿರಾಟವನ್ನು ಪರೀಕ್ಷಿಸಿದ್ದಾರೆ.
ಜೀತು ಪ್ರಜಾಪತಿ ಎಂಬ ಯುವಕ ಹಲವು ದಿನಗಳಿಂದ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ. ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರಿಂದ ಈತ ಸತ್ತೇ ಹೋದ ಎಂದು ಮನೆಯವರು, ಸಂಬಂಧಿಕರು ನಂಬಿದ್ದಾರೆ.
ಸಂಬಂಧಿಕರು, ನೆರೆಹೊರೆಯವರು ಜೀತು ಪ್ರಜಾಪತಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಯನ್ನು ಆರಂಭಿಸಿದ್ದಾರೆ. ಮೊರೆನಾದ ಶಾಂತಿಧಾಮಕ್ಕೆ ಶವವನ್ನು ಎತ್ತಿಕೊಂಡು ಹೋಗಿದ್ದಾರೆ. ಶಾಂತಿಧಾಮದಲ್ಲಿ ಅಂತಿಮ ವಿಧಿವಿಧಾನಗಳು ಆರಂಭವಾಗಿದೆ. ಇನ್ನೆನ್ನೂ ಅಂತ್ಯಸಂಸ್ಕಾರ ನೆರವೇರಬೇಕು ಅನ್ನುವಷ್ಟರಲ್ಲಿ ದೇಹದಲ್ಲಿ ಇದ್ದಕ್ಕಿದ್ದಂತೆ ಉಸಿರಾಟ ಆರಂಭಗೊಂಡಿದೆ. ತಕ್ಷಣವೇ ಸ್ಥಳಕ್ಕೆ ವೈದ್ಯರನ್ನು ಕರೆಸಿ ತಪಾಸ ನಡೆಸಲಾಗಿದೆ. ವೈದ್ಯರು ಪರೀಕ್ಷಿಸಿದಾಗ ವ್ಯಕ್ತಿಯ ಹೃದಯ ನಡೆಯುತ್ತಿರುವುದು ತಿಳಿದಿದೆ. ಸತ್ತವನು ಇನ್ನೂ ಬದುಕಿದ್ದಾನೆ ಅನ್ನೋದು ಗೊತ್ತಾದ ಮೇಲೆ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
- +91 73497 60202
- [email protected]
- November 22, 2024 12:36 PM