ನ್ಯೂಸ್ ನಾಟೌಟ್: ಎಲೆಕ್ಷನ್ಗೂ ಮುನ್ನ ಕೈ ಪಾಳಯದ ದೈತ್ಯ ಶಕ್ತಿ, ಮಾಸ್ ಲೀಡರ್ ಆಗಿದ್ದ ಸಿದ್ದರಾಮಯ್ಯ ನಂಗೂ ಫ್ರೀ ನಿಂಗೂ ಫ್ರೀ… ಮಾಹದೇವಪ್ಪ ನಿಂಗೂ ಫ್ರೀ… ಅನ್ನೋದನ್ನು ಸಖತ್ ಜೋಶ್ನಲ್ಲಿ ಘೋಷಣೆ ಮಾಡಿದ್ರು. ಆದ್ರೆ, ಕಾಂಗ್ರೆಸ್ ಸರ್ಕಾರ ಬಂದು ಸಿದ್ದರಾಮಯ್ಯ ನಾಡದೊರೆಯಾದ್ಮೇಲೆ ನುಡಿದಂತೆ ನಡೆಯುತ್ತಾರೋ ಇಲ್ವೋ ಅನ್ನೋ ಶಂಕೆ ಸಹಜವಾಗಿ ಎಲ್ಲರಲ್ಲಿಯೂ ಇದ್ದೇ ಇತ್ತು. ಯಾಕಂದ್ರೆ ಅವರೇ ಘೋಷಣೆ ಮಾಡಿದ್ದ ಗ್ಯಾರಂಟಿಯ 5 ಫ್ರೀ ಸ್ಕೀಮ್ಗೆ ಬೇಕಾಗಿದ್ದು ನೂರು ಇನ್ನೂರು ಕೋಟಿ ಅಲ್ಲ, ಆರ್ಥಿಕ ತಜ್ಞರೇ ಹೇಳೋ ಪ್ರಕಾರ ಬರೋಬ್ಬರಿ 60 ಸಾವಿರ ಕೋಟಿಗೂ ಹೆಚ್ಚಿನ ಹಣವಾಗಿತ್ತು. ಹೀಗಾಗಿ ಎಲ್ಲೋ ಒಂದು ಕಡೆ ಕಾಂಗ್ರೆಸ್ ಅದ್ರಿಂದ ನುಣಿಚಿಕೊಳ್ಳುತ್ತೆ ಅನ್ನೋ ಅನುಮಾನವಿತ್ತು. ಆದ್ರೆ, ಜನರಲ್ಲಿದ್ದ ನಿರೀಕ್ಷೆಯನ್ನೇ ಸುಳ್ಳಾಗಿಸಿದ ಮುಖ್ಯಮಂತ್ರಿಗಳು ಕನಿಷ್ಠ ಷರತ್ತಿನೊಂದಿಗೆ 5 ಗ್ಯಾರಂಟಿಗೂ ಅಸ್ತು ಅಂದಿದ್ದಾರೆ. ಹಾಗಾದ್ರೆ ಇಷ್ಟೊಂದು ಫ್ರೀ ಸ್ಕೀಮ್ಗಳಿಗೆ ಸಿದ್ದರಾಮಯ್ಯ ಎಲ್ಲಿಂದ ದುಡ್ಡು ತರ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿ ಕಾಣಿಸ್ತಿದೆ.
ಫ್ರೀ ಸ್ಕೀಮ್ಗಳಿಗೆ ಸಿಎಂ ಅಸ್ತು ಅಂತ ಹೇಳಿದ್ದು, ಸಾಮಾನ್ಯ ಯೋಜನೆಗಳು ಅಲ್ಲವೇ ಅಲ್ಲ. ಗೃಹ ಜ್ಯೋತಿ ಯೋಜನೆ ಅಡಿ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಫ್ರೀ, ಎಪಿಎಲ್ ಬಿಪಿಎಲ್ ಅನ್ನೋ ಭೇದಭಾವ ಇಲ್ಲದೇ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2000 ರೂ. ದುಡ್ಡು, ನಿರುದ್ಯೋಗಿ ಡಿಗ್ರಿ ಪದವೀಧರರಿಗೆ 3000 ರೂ. ಮತ್ತು ಡಿಪ್ಲೋಮಾ ಪದವೀಧಾರರಿಗೆ 1500 ರೂ. ಹಣ. ಇನ್ನು ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್ನಲ್ಲಿ ಫ್ರೀ ಪ್ರಯಾಣ, ಅನ್ನ ಭಾಗ್ಯದಲ್ಲಿ ಪ್ರತಿಯೊಬ್ಬ ಬಿಪಿಎಲ್ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ. ಇಷ್ಟೊಂದು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದ್ರಲ್ಲಿ ಕಂಡೀಷನ್ಗಳು ಇವೆ ಇಲ್ಲ ಅಂತಲ್ಲ. ಆದ್ರೂ ಕನಿಷ್ಠ ಕಂಡೀಷನ್ ಗರಿಷ್ಠ ಲಾಭ ಪಾಲಿಸಿ ಕಾಣಿಸ್ತಿದೆ. ಅಂದಹಾಗೇ ಇದೆಲ್ಲದ್ರ ಹಿಂದೆ 2024 ರಲ್ಲಿ ಎದುರಾಗಲಿರೋ ಲೋಕಸಭೆ ಎಲೆಕ್ಷನ್, ಬಿಬಿಎಂಪಿ ಮತ್ತು ಸ್ಥಳೀಯ ಎಲೆಕ್ಷನ್ ಟಾರ್ಗೆಟ್ ಆಗಿರೋದು ಕಾಣಿಸ್ತಿದೆ. ಆದ್ರೆ, ಈ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಾಣಿಕೆ ಮಾಡ್ತೀರಾ ಅನ್ನೋ ಪ್ರಶ್ನೆಗೆ ಸಿದ್ದರಾಮಯ್ಯ ತುಟಿಕ್ ಪಿಟಿಕ್ ಅಂದಿಲ್ಲ.
ಈಗ ಇರೋ ವಿಷ್ಯ ಅಂದ್ರೆ, ರಾಜ್ಯ ಬಜೆಟ್ ಗಾತ್ರ ₹3.10 ಲಕ್ಷ ಕೋಟಿ, ಇದ್ರಲ್ಲಿ ₹60 ಲಕ್ಷ ಕೋಟಿಯನ್ನು ಬರೀ ಫ್ರೀ ಸ್ಕೀಮ್ ಯೋಜನೆಗಳಿಗೆ ತೆಗೆದು ಕೋಟ್ರೆ, ಬಜೆಟ್ನಲ್ಲಿ ಶೇಕಡಾ 30 ರಷ್ಟು ಇದಕ್ಕಾಗಿಯೇ ತೆಗೆದಿಡ್ಬೇಕಾಗುತ್ತೆ. ಬಜೆಟ್ ಗಾತ್ರ ನೋಡಿದ್ರೆ ಇದೇನ್ ಮಹಾ ಅಲ್ಲ ಬಿಡಿ ಅಂತ ನಿಮ್ಗೆ ಅನಿಸ್ಬಬಹುದು. ಆದ್ರೆ, ಅಸಲಿ ವಿಚಾರ ಏನ್ ಅಂದ್ರೆ, ರಾಜ್ಯ ಸರ್ಕಾರ ಈಗಾಗ್ಲೇ ₹5 ಲಕ್ಷ ಕೋಟಿ ಸಾಲವನ್ನು ಹೊಂದಿದೆ. ಇನ್ನು ಕಳೆದ ಬಾರಿ ₹62 ಸಾವಿರ ಕೋಟಿ ಕೊರತೆ ಬಜೆಟ್ ಮಂಡನೆಯಾಗಿದೆ. ಹೀಗಾಗಿ 5 ಫ್ರೀ ಸ್ಕೀಮ್ಗೆ ಹಣ ಹೊಂದಿಸೋದು ಸಿದ್ದರಾಮಯ್ಯಗೆ ನಿಜಕ್ಕೂ ಬಿಗ್ ಚಾಲೆಂಜ್ ಆಗಿ ಕಾಣಿಸ್ತಿದೆ. ಹಾಗಾದ್ರೆ, ಸಿದ್ರಾಮಯ್ಯರಿಗೆ ಗ್ಯಾರಂಟಿಗೆ ದುಡ್ಡು ತರಲು ಇರೋ ಮಾರ್ಗವೇನು ಅಂತ ನೋಡ್ತಾ ಹೋದ್ರೆ ಕಾಣಿಸೋದು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಗರಿಷ್ಠ ಟ್ಯಾಕ್ಸ್ ಏರಿಕೆ ಮಾಡಲು ಎಷ್ಟು ಅವಕಾಶ ಇದೆಯೋ ಅದನ್ನು ಮಾಡೋದು. ಮಹಿಳೆಯರಿಗೆ ಫ್ರೀ ಪ್ರಯಾಣ ಅಂತ ಹೇಳಿ ಟಿಕೆಟ್ ರೇಟ್ ಏರಿಕೆ ಮಾಡ್ಬಹುದು. ವಿದ್ಯುತ್ ಬಿಲ್ ಏರಿಕೆ ಮಾಡ್ಬಹುದು, ಆಸ್ತಿ ನೋಂದಣಿ, ಮದ್ಯದ ಮೇಲಿನ ತೆರಿಗೆ ಏರಿಸ್ಬಹುದು. ಹಾಗೇ ಇನ್ನಷ್ಟು ಹೊಸ ಹೊಸ ಆದಾಯದ ಮೂಲವನ್ನು ಹುಟ್ಕೋಬಹುದು. ಇದೆಲ್ಲ ಮಾಡಿದ್ರೆ ಮುಂದಿನ ಲೋಕಸಭೆ ಎಲೆಕ್ಷನ್ಗೆ ಏಟು ಬೀಳುತ್ತೆ ಅಂತಾದ್ರೆ ಸಾಲದ ಮೊರೆ ಹೋಗೋದು. ಸದ್ಯಕ್ಕೆ ಸಿದ್ದರಾಮಯ್ಯಗೆ ದುಡ್ಡು ತರಲು ಇರೋ ರಾಜ ಮಾರ್ಗ ಅಂದ್ರೆ ಸಾಲದ ಹೊರೆ ಮಾತ್ರ ಎದು ಕಾಣಿಸ್ತಿದೆ. ಒಮ್ಮೆ ಮುಖ್ಯಮಂತ್ರಿಗಳು ಸಾಲ ಮಾಡಿದ್ರೆ ರಾಜ್ಯ ಇನ್ನಷ್ಟು ಸಾಲದ ಸುಳಿಗೆ ಸಿಲುಕುತ್ತೆ. ಆರ್ಥಿಕ ಸಂಕಷ್ಟದಿಂದ ಹೊರಬರಲು ಜನ ಮತ್ತೊಂದು ರೀತಿಯಲ್ಲಿ ಬೆಲೆ ತೆರಬೇಕಾಗುತ್ತೆ. ಬಹುಶಃ ಇದೇ ಉದ್ದೇಶಕ್ಕೆ ಇರ್ಬೇಕು ರಾಜ್ಯಸ್ಥಾನದಲ್ಲಿ ಮಾತಾಡುವಾಗ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ನ ಗ್ಯಾರಂಟಿಯಿಂದ ದೇಶ ದಿವಾಳಿ ಆಗುತ್ತೆ ಅಂತ ಎಚ್ಚರಿಕೆ ನೀಡಿದ್ದು.