ನ್ಯೂಸ್ ನಾಟೌಟ್ : ಮದುವೆ ಅನ್ನೋದೆ ಸಂಭ್ರಮ.ಕುಟುಂಬಸ್ಥರು,ನೆಂಟರು ಸೇರಿ ವಧು-ವರರನ್ನು ಹರಸುವ ಜಾಗ.ಜೀವನದಲ್ಲಿ ಒಮ್ಮೆ ಬರುವ ಈ ಸಂಭ್ರಮ ಅನುಭವಿಸಲು ವಧು-ವರರು ಕೂಡ ಕಾತುರರಾಗಿತ್ತಾರೆ.ಅಲ್ಲಿಯವರೆಗೆ ನನ್ನ ಕನಸಿನ ಹುಡುಗ ಹಾಗಿರಬೇಕು,ಕನಸಿನ ಹುಡುಗಿ ಹೀಗಿರಬೇಕು ಅಂದುಕೊಂಡವರು ಹುಡುಗ ಅಥವಾ ಹುಡುಗ ಸೆಲೆಕ್ಟ್ ಮಾಡುವಾಗಲೇ ಸುಸ್ತಾಗಿರುತ್ತಾರೆ.ಕಡೆಗೂ ಕನಸಿನ ಹುಡುಗಿಯನ್ನು ಅಥವಾ ಕನಸಿನ ಹುಡುಗನನ್ನು ಆರಿಸಿ ಮದುವೆಯಾಗುತ್ತಾರೆ.ಆದರೆ ಇಲ್ಲೊಂದು ಕಡೆ ಮನದನ್ನೆಯನ್ನು ಮದುವೆಯಾದ ವರ ಮೊದಲ ರಾತ್ರಿಯಂದೇ ಶಾಕ್ ಗೊಳಗಾಗಿದ್ದಾನೆ.
ಹೌದು,ತಮ್ಮ ಮುಂದಿನ ಜೀವನದ ಬಗ್ಗೆ ಸಾವಿರಾರು ಕನಸು ಕಾಣುತ್ತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರನಿಗೆ ವಧುವಿನ ಹೊಟ್ಟೆ ನೋವೇ ತಲೆ ನೋವಾಗಿ ಪರಿಣವಿಸಿದೆ.ಚಿಂತೆಗೊಳಗಾದ ವರ ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ವೇಳೆ ವೈದ್ಯರು ಪರಿಕ್ಷಿಸಿದ್ದು, ವೈದ್ಯರ ಮಾತು ಕೇಳಿ, ವರ ಒಂದು ಕ್ಷಣ ಗಾಬರಿಗೊಳಗಾಗಿದ್ದಾನೆ.
ಕಳೆದ ಸೋಮವಾರ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಹಳ್ಳಿಯೊಂದರ ವ್ಯಕ್ತಿ ಸಿಕಂದ್ರಾಬಾದ್ನ ಯುವತಿಯೊಬ್ಬಳನ್ನು ಮದುವೆಯಾಗಿದ್ದಾನೆ. ಮದುವೆ ಕಾರ್ಯಕ್ರಮವೆಲ್ಲ ಸುಸೂತ್ರವಾಗಿಯೇ ನಡೆದಿದೆ.ಮೊದಲ ರಾತ್ರಿಯಂದು ವಧು-ವರರಿಬ್ಬರು ಕೋಣೆ ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಆಕೆಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದೆ. ಏನಪ್ಪಾ ಇದು ಹೊಟ್ಟೆನೋವು ಎಂದು ಚಿಂತೆಗೊಳಗಾದ ವರ ಹಾಗೂ ಮನೆಯವರು ತಡ ಮಾಡದೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಹೊಟ್ಟೆ ನೋವೆಂದು ಆಸ್ಪತ್ರೆ ಸೇರಿದ ನವವಿವಾಹಿತೆಯನ್ನು ಪರೀಕ್ಷಿಸಿದ ವೈದ್ಯರು, ಈಕೆ ಏಳು ತಿಂಗಳ ಗರ್ಭಿಣಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದಾಗಿ ಒಂದು ದಿನ ಕಳೆಯುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮವನ್ನೂ ನೀಡಿದ್ದಾಳೆ. ಆದರೆ ಯುವತಿ ಮದುವೆಗೂ ಮೊದಲೇ ಗರ್ಭ ಧರಿಸಿದ್ದಳು ಎಂದು ಹೇಳಲಾಗಿದೆ.ಆದರೆ ಪಾಲಕರು ಮಗಳ ಈ ವಿಚಾರವನ್ನು ವರನ ಮನೆಯವರಿಗೆ ತಿಳಿಸದೆ ಮದುವೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮದುವೆ ಮಾತುಕತೆ ವೇಳೆ ಮಗಳಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಇದರಿಂದಾಗಿ ಹೊಟ್ಟೆ ಸ್ವಲ್ಪ ಊದಿಕೊಂಡಿದೆ ಎಂದು ವರನ ಮನೆಯವರಿಗೆ ತಿಳಿಸಲಾಗಿತ್ತು. ಇದನ್ನು ನಂಬಿದ್ದ ಯುವಕ ಮದುವೆಯಾಗಲು ಒಪ್ಪಿಗೆಯನ್ನೂ ಸೂಚಿಸಿದ್ದ. ಇದೀಗ ಆಕೆ ಮದುವೆಯಾಗಿ ಒಂದು ದಿನ ಕಳೆಯುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕಂಡು ಆತನಿಗೆ ಶಾಕ್ ಆಗಿದೆ.
ಹೆರಿಗೆಯಾಗುತ್ತಿದ್ದಂತೆ ಯುವತಿ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಅವರು ಸಿಕಂದ್ರಾಬಾದ್ನಿಂದ ಬಂದು ತಾಯಿ ಮತ್ತು ಮಗುವನ್ನು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.ಎರಡೂ ಕುಟುಂಬಗಳು ಮಾತುಕತೆ ಮೂಲಕ ಒಪ್ಪಂದ ಮಾಡಿಕೊಂಡಿದ್ದು ನೂತನ ವಧು-ವರರು ದೂರವಾಗಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಬಂದಿದೆ ಎಂದು ದಂಕೌರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂಜಯ್ ಸಿಂಗ್ ಹೇಳಿದ್ದಾರೆ.