ನ್ಯೂಸ್ ನಾಟೌಟ್ :ಹಿಂದಿನ ಕಾಲದ ಮದುವೆಗೂ ಈಗಿನ ಕಾಲದ ಮದುವೆಗೂ ಬಹಳಷ್ಟು ವ್ಯತ್ಯಾಸಗಳಿವೆ.ಹಿಂದೆ ಮದುವೆ ಟೈಮ್ ನಲ್ಲಿ ಫೋಟೋ ಶೂಟ್ ಇರಲಿಲ್ಲ.ಇದ್ದರೂ ಹುಡುಗ-ಹುಡುಗಿಯ ನಾಲ್ಕೈದು ಫೋಟೋಗಳನ್ನು ಫೋಟೋಗ್ರಾಫರ್ ಕ್ಲಿಕ್ಕಿಸುತ್ತಿದ್ದರು ಅಷ್ಟೇ.ಆದರೆ ಈಗಿನ ಕಾಲದಲ್ಲಿ ಮದುವೆ ಹೇಗಿರುತ್ತೆ ಅಂದ್ರೆ ಫೋಟೋಗ್ರಾಫರ್ ಕೂಡ ಕ್ರಿಯೇಟಿವ್ ಆಗಿ ಯೋಚಿಸಿ ಮಧುಮಗಳು-ಮಧುಮಗನ ಫೋಟೋವನ್ನು ಕ್ಲಿಕ್ಕಿಸುತ್ತಾರೆ.ಪ್ರೀವೆಡ್ಡಿಂಗ್ ಶೂಟ್ ಜತೆಗೆ ಮದುವೆಯ ಟೈಮ್ ನಲ್ಲಿಯೂ ವಿವಿಧ ಪೋಸ್ ಗಳ ಫೋಟೋ ಕ್ಲಿಕ್ಕಿಸುವ ಟ್ರೆಂಡ್ ಈಗ ಕ್ರಿಯೆಟ್ ಆಗಿದೆ.ಹಾಗೆ ಫೋಟೋ ಕ್ಲಿಕ್ಕಿಸಲು ಹೋದ ಫೋಟೋಗ್ರಾಫರ್ ಗೆ ಅಚ್ಚರಿಯೊಂದು ಕಾದಿತ್ತು ಅದೇನು ಅನ್ನೋದನ್ನ ಇಲ್ಲಿ ಓದಿ…
ಮದುವೆಯ ಕೆಲವೊಂದು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗೋದನ್ನು ನೋಡ್ತಾ ಇರ್ತೀವಿ.ಮದುವೆಯಾದ ಜೋಡಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಮಾಡುತ್ತಿದ್ದಾಗ ಆನೆಯೊಂದು ಅವರ ಮೇಲೆ ಕೋಲು ಬಿಸಾಡಿದ್ದ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಸದ್ಯ ಈ ವಿಡಿಯೋ ಅವೆಲ್ಲಕ್ಕಿಂತ ಸ್ವಲ್ಪ ಡಿಫರೆಂಟಾಗಿದೆ. ಈ ದೃಶ್ಯ ಖಂಡಿತವಾಗಿಯೂ ನಿಮ್ಮನ್ನು ನಗಿಸುವಂತೆ ಮಾಡೋದ್ರಲ್ಲಿ ಯಾವುದೇ ಅನುಮಾನನನೇ ಇಲ್ಲ.ವಿಡಿಯೋದಲ್ಲಿ ವಧು-ವರರು ಒಳ್ಳೆಯ ರೀತಿಯಲ್ಲೇ ಪೋಸ್ ನೀಡುತ್ತಿದ್ದರು.ಇದ್ದಕ್ಕಿಂತ ಹಾಗೆ ಒಬ್ಬ ಛಾಯಾಗ್ರಾಹಕ ತನ್ನ ಕ್ಯಾಮೆರಾ ಲೆನ್ಸ್ನಿಂದ ಇಬ್ಬರನ್ನು ಸೆರೆಹಿಡಿಯುತ್ತಿದ್ದು, ಈ ವೇಳೆ ಛಾಯಾಗ್ರಾಹಕ ಲಿಪ್ ಕಿಸ್ ಮಾಡುವಂತೆ ಸೂಚಿಸಿದ್ದಾನೆ. ಆತನ ಸೂಚನೆಯಂತೆ ವಧುವರರು ಹತ್ತಿರ ಬಂದು ಪರಸ್ಪರ ಚುಂಬಿಸಲು ಪ್ರಾರಂಭಿಸಿದರು.ಆದರೆ ಅಲ್ಲಿ ಆಗಿದ್ದೇ ಬೇರೆ…
Viral video ಇಲ್ಲಿದೆ👇
ಕೂಡಲೇ ವಧು-ವರರಿಬ್ಬರೂ ಜೋರಾಗಿ ಚುಂಬಿಸತೊಡಗುತ್ತಾರೆ.ಅಷ್ಟರಲ್ಲಿ ಒಬ್ಬರನ್ನೊಬ್ಬರು ಹಿಡಿದುಕೊಂಡು ಚುಂಬಿಸಲು ಶುರು ಮಾಡುತ್ತಾರೆ.ಇದರಿಂದ ಶಾಕ್ ಆದ ಫೋಟೋಗ್ರಾಫರ್ ತಮ್ಮ ಕೈಗಳನ್ನು ಕೆಳಗೆ ಬಿಡಲು ಕೇಳುತ್ತಾನೆ.ಆ ವೇಳೆಗಾಗಲೇ ವಧು ಮತ್ತು ವರರು ಮೈ ಮರೆತಿದ್ದರು ಎನ್ನಲಾಗಿರುವ ವಿಡಿಯೋ ಸಕತ್ ವೈರಲ್ ಆಗಿದೆ.ಕೆಲವರು ಈ ಪೋಸ್ಟ್ ನೋಡಿ ಸಲಹೆ ನೀಡಿದ ಫೋಟೋಗ್ರಾಫರ್ ಗೆ ಕ್ಲಾಸ್ ತೆಗೆದುಕೊಂಡ್ರೆ ಇನ್ನೂ ಕೆಲವರು ಹಾಸ್ಯದ ಸಿಂಬಲ್ ಹಾಕಿ ಕಾಮೆಂಟ್ ಮಾಡಿದ್ದಾರೆ.