ನ್ಯೂಸ್ ನಾಟೌಟ್: ಬಿಜೆಪಿಯವರು ಅನ್ನಭಾಗ್ಯವನ್ನು ತಡೆದು ಬಡವರ ಹೊಟ್ಟೆಗೆ ಹೊಡೆಯುತ್ತಿದ್ದಾರೆ ಎಂದು ಸುಳ್ಯದ ಕೆಪಿಸಿಸಿ ನಾಯಕ ಹಿರಿಯ ವಕೀಲ ಎಂ. ವೆಂಕಪ್ಪ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ವೆಂಕಪ್ಪ ಗೌಡರು, ಬಿಜೆಪಿ ಸರ್ಕಾರ ವಿಫಲಗೊಂಡ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಜುಲೈ 1 ರಿಂದ ಪ್ರತೀ ಕುಟುಂಬಕ್ಕೂ ಅನ್ನಭಾಗ್ಯ ಯೋಜನೆ ಜಾರಿಯಾಗಿದೆ. ಆದರೆ ಭಾರತೀಯ ಜನತಾ ಪಾರ್ಟಿ ಒಂದು ಕಡೆ ಸರ್ಕಾರ ಬಡವರಿಗೆ ಅಕ್ಕಿ ಕೊಡುವುದಿಲ್ಲ , ಮತ್ತೊಂದು ಕಡೆ ಅಕ್ಕಿ ಕೊಡುತ್ತಿದ್ದಾರೆ ಎಂದು ಹೇಳಿ ಎರಡೂ ದೋಣಿಯಲ್ಲಿ ಕಾಲಿಡುತ್ತಿದ್ದಾರೆ.
ಕೇಂದ್ರದಿಂದ ಬೇಡಿಕೆಯಿಟ್ಟ ಕಾಂಗ್ರೆಸ್ನ ಅಕ್ಕಿ ಯೋಜನೆಗೆ ಅಕ್ಕಿಯನ್ನು ಕೊಡಬೇಡಿ ಕೊಟ್ಟರೆ ಖರ್ಚು ಜಾಸ್ತಿ ಬೀಳುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿಗರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ, ಬಡವರ ಹೊಟ್ಟೆಗೆ ಮಣ್ಣು ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಯಾವ ಪಕ್ಷಕ್ಕೂ ಹೆದರುವುದಿಲ್ಲ. ಸುಳ್ಯದಲ್ಲಿ ಒಟ್ಟಾಗಿ ನಿಂತು ಪಕ್ಷವನ್ನು ಕಟ್ಟುತ್ತೇವೆ. ಹೇಳಿದ ಎಲ್ಲಾ ಯೋಜನೆಗಳನ್ನು ಮಾಡಿ ಜುಲೈ 1 ರಿಂದ ಪ್ರತೀ ಕುಟುಂಬಕ್ಕೂ ಹತ್ತು ಕೆ.ಜಿ ಅನ್ನ ಭಾಗ್ಯ ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು . ಈ ಸಂದರ್ಭದಲ್ಲಿ ಭವಾನಿಶಂಕರ್ ಕಲ್ಮಡ್ಕ , ಶರೀಫ್, ಗೋಕುಲ್ ದಾಸ್, ಧೀರ ಕ್ರಾಸ್ತಾ , ಚೇತನ್ ಉಪಸ್ಥಿತರಿದ್ದರು.