ನ್ಯೂಸ್ ನಾಟೌಟ್ : ಡಾ. ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ 2022-23 ನೇ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವು ಜೂನ್ 6 ರಂದು ನಡೆದಿದ್ದು, ಉದ್ಘಾಟನೆಯನ್ನು ಕು. ಶಾಸಕಿ ಭಾಗೀರಥಿ ಮುರಳ್ಯ ಅವರು ನಿರ್ವಹಿಸಿದರು.
ಈ ಕ್ರೀಡಾಕೂಟದ ಕುರಿತು ಮಾತನಾಡಿದ ಕು.ಶಾಸಕಿ ಭಾಗೀರಥಿ ಮುರಳ್ಯ ವಿದ್ಯಾರ್ಥಿಗಳು ಬರೀ ಪಠ್ಯೇತರ ಚಟುವಟಿಕೆಯನ್ನು ಮಾತ್ರ ನೋಡದೆ, ದೈಹಿಕ ಚಟುವಟಿಕೆ, ವ್ಯಾಯಾಮ ,ಯೋಗಾಸನದ ಮೂಲಕ ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಬೇಕು ಎಂದರು. ಕ್ರೀಡೆಗಳಲ್ಲಿ ಭಾಗವಹಿಸಿದ ಅನೇಕ ಯುವಕ – ಯುವತಿಯರು ಇಂದು ದೇಶವನ್ನು ಪ್ರತಿನಿಧಿಸಿ ಆಡಿ ಪದಕ ಮತ್ತು ಹೆಸರು ಗಳಿಸಿದವರಂತೆ ಇವರು ಆಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪದ್ಮನಾಭ ಶೆಟ್ಟಿ, ಸಭಾಧ್ಯಕ್ಷರಾಗಿ ಪ್ರಾಂಶುಪಾಲ ದಾಮೋದರ ಕಣಜಾಲು ಉಪಸ್ಥಿತರಿದ್ದರು.
ಜೊತೆಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ ಕೆ. ಐಕ್ಯುಎಸಿ ಸಹ ಸಂಚಾಲಕರಾದ ಮಂಜುನಾಥ ಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕಾಂತರಾಜು ಸಿ, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಯತೀಶ್ ಕುಮಾರ್ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ನೀಶ್ಮಾ ಕೆ.ವಿ ಸ್ವಾಗತಿಸಿ, ಮಾನಸ ವಿ.ಜಿ ವಂದಿಸಿ, ದೀಕ್ಷಿತಾ ಬಿ.ಎಲ್ ಕಾರ್ಯಕ್ರಮ ನಿರೂಪಿಸಿದರು.