ನ್ಯೂಸ್ ನಾಟೌಟ್: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಕ್ರಮ ಗೋಸಾಗಾಟ, ಗೋಹತ್ಯೆಗೆ ಪುತ್ತೂರಿನಲ್ಲಿ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಪುತ್ತೂರು ನಗರ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.
ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ವಾಪಸ್ ತರುವುದಕ್ಕೆ ನಿರ್ಧರಿಸಿದೆ. ಈ ಬೆನ್ನಲ್ಲೇ ಹಿಂದೂ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಜೂ.29, 30 ಮತ್ತು ಜುಲೈ 1 ರಂದು ಅಥವಾ ಇತರೆ ದಿನಗಳಂದು ಗೋ ಹತ್ಯೆಗಳು ಹೆಚ್ಚಾಗಬಹುದು. ಹೀಗಾಗಿ ಯಾವುದೇ ರೀತಿಯ ವಧೆ/ಬಲಿ/ಕುರ್ಬಾನಿ/ ಹತ್ಯೆ ಹಾಗೂ ಅಕ್ರಮ ಗೋಸಾಗಾಟವಾಗದಂತಹ ಪ್ರಕರಣಗಳು ನಡೆಯಲು ಅವಕಾಶ ನೀಡಬಾರದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ಜಿಲ್ಲಾ ಸುರಕ್ಷ ಪ್ರಮುಖ್ ಜಯಂತ್ ಕುಂಜೂರುಪಂಜ, ಬಜರಂಗದಳ ಪುತ್ತೂರು ನಗರ ಪ್ರಖಂಡ ಸಂಯೋಜಕರಾದ ಹರೀಶ್ ದೋಳ್ಪಾಡಿ, ಪುತ್ತೂರು ನಗರ ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ಭರತ್ ಬಲ್ನಾಡು, ಗ್ರಾಮಾಂತರ ಪ್ರಖಂಡ ಸಾಪ್ತಾಹಿಕ ಮಿಲನ್ ಪ್ರಮುಖ್ ಪ್ರಜ್ವಲ್ ಸಂಪ್ಯ, ಗ್ರಾಮಾಂತರ ಪ್ರಖಂಡ ಸುರಕ್ಷಾ ಪ್ರಮುಖ್ ದಿನೇಶ್ ತಿಂಗಳಾಡಿ,ಪ್ರಮುಖರಾದ ಧನರಾಜ್ ಬೆಳ್ಳಿಪ್ಪಾಡಿ, ಯಕ್ಷಿತ್, ನಿಶಾಂತ್, ಪ್ರದೀಪ್ ಉಪಸ್ಥಿತರಿದ್ದರು.