ನ್ಯೂಸ್ ನಾಟೌಟ್: ಜ್ಯೋತಿಷ್ಯದಲ್ಲಿ ಅನೇಕ ಯೋಗಗಳು ಬಹಳ ಅಪರೂಪವಾಗಿರುತ್ತದೆ. ಈ ರೀತಿಯ ಯೋಗ ರೂಪುಗೊಂಡರೆ ಅದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ ಎಂಬುದು ನಂಬಿಕೆ.
ಗ್ರಹಗಳ ಸಂಯೋಗದಿಂದ ಅಥವಾ ರಾಶಿ ಬದಲಾವಣೆಗಳ ಮೂಲಕ ಯೋಗ, ಕರಣ, ವಾರ, ತಿಥಿ, ನಕ್ಷತ್ರಗಳಿಗನುಗುಣವಾಗಿ ಹಲವರ ಜೀವನದಲ್ಲಿ ವಿಶೇಷ ಫಲಗಳನ್ನು ನೀಡುವ ಯೋಗಗಳು ಒಲಿಯುತ್ತವೆ. ಸದ್ಯ ಮಂಗಳ ಗ್ರಹ ಸಿಂಹ ರಾಶಿಯನ್ನ ಪ್ರವೇಶ ಮಾಡುವುದರಿಂದ ಸಂಸಪ್ತಕ ಯೋಗ ಸೃಷ್ಟಿಯಾಗುತ್ತದೆ. ಈ ಯೋಗದಿಂದ 5 ರಾಶಿಯವರ ಬದುಕಿನಲ್ಲಿ ಹೊಸ ಅಲೆ ಆರಂಭವಾಗುತ್ತದೆ. ಯಾವೆಲ್ಲಾ ರಾಶಿಗೆ ಇದರಿಂದ ಲಾಭವಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಈ ರಾಶಿಯವರಿಗೆ ಯೋಗ ಕಾರಣದಿಂದ ಅದೃಷ್ಟ ಒಲಿಯುತ್ತದೆ. ಅವರು ಈ ಸಂದರ್ಭದಲ್ಲಿ ಏನೇ ಮಾಡಿದರೂ ಯಶಸ್ಸು ಸಿಗುತ್ತದೆ. ಹಳೆಯ ಹೂಡಿಕೆಗಳಿಂದ ಸಹ ಲಾಭ ಗಳಿಸುವ ಅವಕಾಶ ನಿಮ್ಮದಾಗುತ್ತದೆ. ಒಟ್ಟಾರೆ ಈ ಸಮಯ ನಿಮ್ಮ ಖುಷಿಯನ್ನ ಹೆಚ್ಚಿಸಲಿದೆ.
ಧನಸ್ಸು ರಾಶಿಯವರಿಗೆ ಸಹ ಈ ಮಂಗಳ ಸಂಚಾರದಿಂದ ಬಹಳ ಲಾಭಗಳಾಗುತ್ತದೆ. ಅವರ ಜೀವನದಲ್ಲಿ ಪ್ರಗತಿ ಸಾಧಿಸಲು ಅನೇಕ ಅವಕಾಶಗಳು ಹುಡುಕಿ ಬರುತ್ತದೆ. ಇಷ್ಟುದಿನ ಕಾಡಿದ್ದ ಸಮಸ್ಯೆಗಳಿಗೆ ಈಗ ಮುಕ್ತಿ ಸಿಗುತ್ತದೆ.
ಈ ಮಕರ ರಾಶಿಯವರಿಗೆ ಸಹ ಸಂಸಪ್ತಕ ಯೋಗ ಲಾಭದಾಯಕವಾಗಿರುತ್ತದೆ ಎನ್ನಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮಕ್ಕಳಿಂದ ಸಿಹಿ ಸುದ್ದಿ ಸಿಗಲಿದೆ. ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿಬರಲಿದೆ.
ಈ ಯೋಗದ ಪರಿಣಾಮದಿಂದ ತುಲಾ ರಾಶಿಯವರ ಬದುಕು ಬದಲಾಗುತ್ತದೆ. ಅವರಿಗೆ ಆರ್ಥಿಕವಾಗಿ ದೊಡ್ಡ ಲಾಭವಾಗುತ್ತದೆ. ವ್ಯವಹಾರದಲ್ಲಿ ಸಹ ನಿಮಗೆ ವಿವಿಧ ಅವಕಾಶಗಳು ಸಿಗುತ್ತದೆ ಹಾಗೂ ಲಾಭವಾಗುತ್ತದೆ. ಕಷ್ಟಗಳಿಗೆ ಪರಿಹಾರ ಸಿಗುತ್ತದೆ.
ಇದೇ ರಾಶಿಗೆ ಮಂಗಳ ಪ್ರವೇಶ ಮಾಡುವುದರಿಂದ ಬಹಳ ಲಾಭವಾಗುತ್ತದೆ. ಏನೇ ಮಾಡಿದರೂ ಸುಲಭವಾಗಿ ಯಶಸ್ಸು ಸಿಗುತ್ತದೆ. ಅಲ್ಲದೆ ಆರ್ಥಿಕವಾಗಿ ಸಹ ನಿಮಗೆ ಅನೇಕ ಲಾಭ ಸಿಗುತ್ತದೆ. ಕಷ್ಟಗಳಿಂದ ಈಗ ಮುಕ್ತಿ ಸಿಗುತ್ತದೆ.