ನ್ಯೂಸ್ ನಾಟೌಟ್ : ಅಪಾರ್ಟ್ಮೆಂಟ್ ನ ೧೦ನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕ ಬಳಿಯ ನಾಗೇನಹಳ್ಳಿಯಲ್ಲಿ ನಡೆದಿದೆ.ಅಮೃತಾ ಶರ್ಮ( 27) ಸಾವನ್ನಪ್ಪಿರುವ ಮಹಿಳೆ.
ಲಖನೌ ಮೂಲದ ಅಮೃತಾ ಕುಟುಂಬದ ಜತೆ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು.ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ ಹತ್ತನೇ ಮಹಡಿಯಲ್ಲಿದ್ದು, ಕಿಚನ್ಗೆ ಅಟ್ಯಾಚ್ ಆದ ಬಾಲ್ಕನಿಯಿಂದ ಹಾರಿದ್ದಾರೆ. ಕೂಡಲೇ ಸ್ಥಳೀಯರು ಮಹಿಳೆಯನ್ನು ಅಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅಮೃತಾ ಶರ್ಮ ಕೊನೆಯುಸಿರೆಳದಿದ್ದಾರೆಂದು ತಿಳಿದು ಬಂದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಅಮೃತಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದರು. ಇತ್ತೀಚಿಗೆ ತನ್ನ ತಂದೆಯನ್ನು ಕಳೆದುಕೊಂಡು ನೊಂದಿದ್ದರು ಎನ್ನಲಾಗಿದೆ.