ನ್ಯೂಸ್ ನಾಟೌಟ್: ಕಾಯಿಲೆ ಅನ್ನುವುದು ಯಾರನ್ನೂ ಹೇಳಿಕೇಳಿ ಬರುವುದಿಲ್ಲ. ಆರೋಗ್ಯವಂತ ಮನುಷ್ಯ ಎಷ್ಟು ಹೊತ್ತಿಗೆ ಹೇಗೆ ಎಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಅನ್ನುವುದನ್ನು ಊಹಿಸುವುದು ಕಷ್ಟ. ಇಲ್ಲೊಬ್ಬ ಯುವಕನ ಕಥೆಯೂ ಅದೇ ಆಗಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೈಚಾರ್ ಎಂಬಲ್ಲಿ ವಾಸವಿರುವ ಪ್ರಮೋದ್ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಎಲ್ಲರಂತೆ ಪ್ರಮೋದ್ ತನ್ನ ಕುಟುಂಬ ಮಗು, ಪತ್ನಿಯೊಂದಿಗೆ ನೆಮ್ಮದಿಯಾಗಿದ್ದರು. ಇದೀಗ ಇದ್ದಕ್ಕಿದ್ದಂತೆ ಅವರು ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರ ಮುಂದಿನ ಜೀವನ ಕಷ್ಟವಾಗಿದೆ. ವೈದ್ಯರು ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸುಮಾರು 15 ಲಕ್ಷ ರೂ. ತಗುಲಬಹುದು ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಬಡತನದ ಹಿನ್ನೆಲೆಯುಳ್ಳ ಯುವಕನಿಗೆ ದಾನಿಗಳು ತಮ್ಮ ಕೈಲಾದ ಧನ ಸಹಾಯವನ್ನು ಮಾಡಬೇಕಾಗಿ ಕುಟುಂಬ ಮೂಲಗಳು ವಿನಂತಿಸಿವೆ. ಹೆಚ್ಚಿನ ಮಾಹಿತಿಗೆ 8105062135, 7349337125 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಗೂಗಲ್ ಪೇ ಮೂಲಕ ಈ ನಂಬರ್ಗೆ ಹಣವನ್ನು ಕಳಿಸಬಹುದಾಗಿದೆ.