ನ್ಯೂಸ್ ನಾಟೌಟ್: ಅಮೆರಿಕ ಪ್ರವಾಸ ಮುಗಿಸಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಈಜಿಪ್ಟ್ ಪ್ರವಾಸವನ್ನು ಆರಂಭಿಸಿದ್ದಾರೆ. ಎರಡು ದಿನಗಳ ಕಾಲ ಈಜಿಪ್ಟ್ನಲ್ಲಿ ಪ್ರಧಾನಿ ಮೋದಿ ಇದ್ದು ಅಲ್ಲಿನ ಗಣ್ಯರ ಜೊತೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಮೋದಿಯವರು ಮಸೀದಿಯೊಂದಕ್ಕೆ ಭೇಟಿ ನೀಡಲಿದ್ದಾರೆ. ಸಹಜವಾಗಿಯೇ ಪ್ರಧಾನಿ ಮೋದಿಯ ಮಸೀದಿ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಈಜಿಪ್ಟ್ಗೆ ಭೇಟಿ ನೀಡುತ್ತಿರುವ ಮೋದಿ ಕೈರೋದಲ್ಲಿನ ಒಂದು ಸಾವಿರ ವರ್ಷಗಳಷ್ಟು ಹಳೆಯ ಐತಿಹಾಸಿಕ ಇಮಾಮ್ ಅಲ್ ಹಕೀಮ್ ಬಿ ಅಮರ್ ಅಲ್ಲಾ ಮಸೀದಿಗೆ ಭೇಟಿ ನೀಡಲಿದ್ದಾರೆ. ಈ ಮಸೀದಿಯನ್ನು ಪತಿಮಿಡ್ ವಂಶಸ್ಥರು ಖಲೀಫನ ಕಾಲದಲ್ಲಿ ನಿರ್ಮಾಣ ಮಾಡಿದ್ದಾರೆ. ವರ್ಷಗಳು ಕಳೆದಂತೆ ಮಸೀದಿ ಅವನತಿಯತ್ತ ಸಾಗಿತ್ತು. ಆದ್ರೆ, ದಾವೂದಿ ಬೊಹರ್ ಎನ್ನುವ ಸಮುದಾಯದವರು ಮರುನಿರ್ಮಾಣ ಮಾಡಿದ್ದಾರೆ. ಪ್ರಧಾನಿ ಮೋದಿ ವಿದೇಶಗಳಲ್ಲಿ ಮಸೀದಿಗೆ ಭೇಟಿ ನೀಡುತ್ತಿರುವ 3ನೇ ಮಸೀದಿ ಇದಾಗಿದೆ. ಈ ಮೊದಲು ಅಂದರೆ, 2015ರಲ್ಲಿ ಅಮೆರಿಕಕ್ಕೆ ಹೋಗಿದ್ದಾಗ ಅಲ್ಲಿನ ಮಸೀದಿಗೆ ಭೇಟಿ ಕೊಟ್ಟಿದ್ದರು. ನಂತರ 2018ರಲ್ಲಿ ಇಂಡೋನೇಷ್ಯಾ ರಾಷ್ಟ್ರದ ಮಸೀದಿಗೆ ಭೇಟಿ ನೀಡಿರುವುದು ಕೊನೆಯದಾಗಿತ್ತು. ಸದ್ಯ ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ಈಜಿಪ್ಟ್ನಲ್ಲಿ ನಿರ್ಮಿಸಿದ 11ನೇ ಶತಮಾನದ ಮಸೀದಿಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.