ನ್ಯೂಸ್ ನಾಟೌಟ್: ಬೀದಿ ನಾಯಿಗಳ ಕಾಟ ಭಾರತದಲ್ಲಿ ಜನರಿಗೆ ದೊಡ್ಡ ತಲೆ ನೋವಾಗಿದೆ. ಇದೀಗ ವಿದೇಶದಲ್ಲೂ ಜನರಿಗೆ ಬೀದಿ ಶ್ವಾನಗಳು ಕಚ್ಚುತ್ತವೇ ಅನ್ನುವುದು ಸಾಬೀತಾಗಿದೆ. ಆಸ್ಟ್ರೇಲಿಯಾದ ಬೀಚ್ವೊಂದರಲ್ಲಿ ತಣ್ಣಗೆ ಗಾಳಿ ತೆಗೆದುಕೊಂಡು ಅರೆಬೆತ್ತಲೆಯಾಗಿ ಬಿಕಿನಿಯಲ್ಲಿ ನೆಮ್ಮದಿಯಾಗಿ ಮಲಗಿದ್ದ ಯುವತಿಗೆ ಬೀದಿ ನಾಯಿಯೊಂದು ಕಿರಿಕ್ ಮಾಡಿದೆ. ಆಕೆಯ ಬಿಕಿನಿಗೇ ಹಿಂದಿನಿಂದ ಬಂದು ಕಚ್ಚಿ ಸ್ಥಳದಿಂದ ಪರಾರಿಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾದ ಪುರಾತನ ತಳಿಯಾದ ಡಿಂಗೋ ನಾಯಿಗಳು ಅಲ್ಲಿನ ಕ್ವೀನ್ಸ್ಲ್ಯಾಂಡ್ನಲ್ಲಿರುವ ಫ್ರೇಸರ್ ದ್ವೀಪಕ್ಕೆ ಲಗ್ಗೆ ಇಡುತ್ತಿವೆ. ಬೀಚ್ನಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿರುವವರ ಮೇಲೆ ದಾಳಿ ನಡೆಸುತ್ತಿವೆ ಅನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಕ್ವೀನ್ಸ್ಲ್ಯಾಂಡ್ನ ಫ್ರೇಸರ್ ದ್ವೀಪ ಮತ್ತಿತರ ಬೀಚ್ಗಳಲ್ಲಿ ಮರಳ ಮೇಲೆ ಯುವತಿಯರು ಬಿಕಿನಿ ತೊಟ್ಟು ಮಲಗಿರುತ್ತಾರೆ. ಇದು ಅಲ್ಲಿನ ವಾತಾವರಣದಲ್ಲಿ ಸಾಮಾನ್ಯ. ಹೀಗೆ ನೆಮ್ಮದಿಯಾಗಿ ಮಲಗುವ ಮಹಿಳೆಯರನ್ನೇ ಈಗ ಬೀದಿ ನಾಯಿಗಳು ಟಾರ್ಗೆಟ್ ಮಾಡುತ್ತಿವೆ. ನಾಯಿಗಳು ಗುಂಪು ಗುಂಪಾಗಿ ದಾಳಿ ನಡೆಸುತ್ತಿವೆ ಎಂದು ಪ್ರವಾಸಿಗರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಹೀಗೆ ಬಿಕಿನಿ ತೊಟ್ಟು, ಮರಳ ಮೇಲೆ ಮಲಗಿದ್ದ ಯುವತಿಯೊಬ್ಬಳಿಗೆ ನಾಯಿ ಕಚ್ಚಿದ ವಿಡಿಯೊ ಸಿಕ್ಕಾಪಟೆ ವೈರಲ್ ಆಗಿದೆ. ನಾಯಿ ಆಕೆಯ ಹಿಂಬದಿಗೆ ಬಂದು, ಬಿಕಿನಿಗೇ ಬಾಯಿ ಹಾಕಿದೆ. ಅಲ್ಲಿಗೆ ಕಚ್ಚಿದೆ. ಈ ವೇಳೆ ಆಕೆ ನೋವು ತಡೆಯಲಾಗದೆ ಎದ್ದು ಓಡಿದ್ದಾಳೆ. ಈ ವೇಳೆ ಅಲ್ಲೆ ಇದ್ದ ಕೆಲವು ಗಂಡಸರು ನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ವಿಡಿಯೋ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.
ಕ್ವೀನ್ಸ್ ಲ್ಯಾಂಡ್ ಬೀಚ್ಗಳಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಶ್ವಾನಗಳು ದೊಡ್ಡ ತಲೆ ನೋವಾಗಿದೆ. ಈ ಬಗ್ಗೆ ಈಗಾಗಲೇ ಕ್ವೀನ್ಸ್ಲ್ಯಾಂಡ್ ಡಿಪಾರ್ಟ್ಮೆಂಟ್ ಆಫ್ ಎನ್ವಿರಾನ್ಮೆಂಟ್ ಆ್ಯಂಡ್ ಸೈನ್ಸ್ ಎಚ್ಚರಿಕೆಯನ್ನೂ ನೀಡಿದೆ. ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವ ಭರವಸೆಯೂ ಸಿಕ್ಕಿದೆ. ಈ ವಿಡಿಯೊಕ್ಕೆ 1.5 ಮಿಲಿಯನ್ಗಳಿಗಿಂತಲೂ ಜಾಸ್ತಿ ವೀಕ್ಷಣೆ ಬಂದಿರುವುದು ವಿಶೇಷ.