ನ್ಯೂಸ್ ನಾಟೌಟ್ : ಕಳೆದ ಕೆಲವು ದಿನಗಳಿಂದ ತೋಟಕ್ಕೆ ನುಗ್ಗಿ ಉಪಟಳ ನೀಡಿ ಮರೆಯಾಗುತ್ತಿದ್ದ ಕಾಡಾನೆಗಳು ಇದೀಗ ರಾಜಾರೋಷವಾಗಿ ತಿರುಗಾಡುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಪಟ್ಲಡ್ಕ, ಕಾಪಿನಬಾಗಿಲು, ಕುಂಡಡ್ಕ ಪರಿಸದಲ್ಲಿ ರಾತ್ರಿ ವೇಳೆ ಕೃಷಿ ತೋಟಗಳಿಗೆ ದಾಳಿ ಮಾಡಿ ಹಾನಿ ಮಾಡುತ್ತಿದ್ದ ಕಾಡಾನೆಗಳ ಹಿಂಡು ಇಂದು ಬೆಳಗಿನಿಂದಲೇ ಮಾಯಿಲಕೋಟೆ ಪರಿಸರದಲ್ಲಿ ಸಂಚರಿಸುತ್ತಿದೆ ಎನ್ನಲಾಗಿದೆ.ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು,ಮೂರು ಕಾಡಾನೆಗಳು ಇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸುತ್ತ ಮುತ್ತ ಮನೆಗಳಿದ್ದು,ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿಗಳ ಗಮನದಲ್ಲಿದ್ದು,ಅವರು ಕಾಡಾನೆಗಳ ಚಲನವಲನಗಳನ್ನು ಗಮನಿಸುತ್ತಿದ್ದು,ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಮಾಹಿತಿಯನ್ನು ನೀಡಿದ್ದಾರೆ.