ನ್ಯೂಸ್ ನಾಟೌಟ್: ತುಳುನಾಡಿಗೆ ಅದರದ್ದೇ ಆದ ಸಂಸ್ಕೃತಿ ಇತಿಹಾಸವಿದೆ. ತುಳು ಭಾಷೆ ಆಚಾರ -ವಿಚಾರದ ವಿಷಯ ಬಂದಾಗ ಜಾತಿ ಧರ್ಮವನ್ನು ಮೀರಿ ಇಲ್ಲಿನ ಜನರೆಲ್ಲರು ಒಟ್ಟಾಗಿ ನಿಲ್ಲುತ್ತಾರೆ. ಇದು ಹೌದು ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಂದು ದೈವಗಳ ಬಗ್ಗೆ ಇಲ್ಲಿನ ಸಂಸ್ಕೃತಿ ಆಚಾರ-ವಿಚಾರದ ಬಗ್ಗೆ ಮಾತನಾಡಿದ್ದ ತುಳುನಾಡಿನ ರಾಜಕಾರಣಿ ಯುಟಿ. ಖಾದರ್ ಇಂದು ಅಧಿಕಾರದಲ್ಲಿ ಸ್ಪೀಕರ್ ಸ್ಥಾನಕ್ಕೇರಿದ್ದರೆ ದೈವಗಳ ಬಗ್ಗೆ ಹಗುರವಾಗಿ ಮಾತನಾಡಿದ್ದ ಜೆ.ಸಿ.ಮಾದುಸ್ವಾಮಿ ಸೋತು ಮನೆಯಲ್ಲಿ ಕುಳಿತಿದ್ದಾರೆ. ಅಂದು ಸದನದಲ್ಲಿ ಏನಾಗಿತ್ತು? ಯುಟಿ ಖಾದರ್ ಹೇಳಿದ್ದೇನು? ಅದಕ್ಕೆ ಮಾದುಸ್ವಾಮಿ ಉತ್ತರಿಸಿದ್ದೇನು ಅನ್ನುವುದನ್ನು ಕಂಪ್ಲೀಟ್ ಆಗಿ ವಿವರಿಸಿದ್ದೀವಿ ನೋಡಿ.
ಸದನದ ಚರ್ಚೆಗೆ ಸಂಬಂಧಪಟ್ಟಂತೆ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ:👉 https://www.facebook.com/100038228719504/videos/245196951440670/
ಅಂದು ಯುಟಿ ಖಾದರ್ ಸದನದಲ್ಲಿ ಮಾತನಾಡಿ, “ತುಳು ಭಾಷೆ ತುಳುನಾಡಿನ ಜನರು ಆಡುವ ಭಾಷೆ, ಅದೇ ಭಾಷೆಯನ್ನು ಅಲ್ಲಿನ ದೈವಗಳು ಕೂಡ ಆಡುತ್ತವೆ. ಆ ಭಾಷೆಗೆ ವಿಶಿಷ್ಟ ಸ್ಥಾನಮಾನವಿದೆ. ಆ ಭಾಷೆಗೆ ಮಾನ್ಯತೆ ನೀಡಬೇಕು. ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿ ಘೋಷಿಸಿ ಸ್ಥಾನಮಾನ ನೀಡಬೇಕು” ಎಂದು ಒತ್ತಾಯಿಸಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ್ದ ಅಂದಿನ ಕಾನೂನು ಮತ್ತು ಸಂಸದೀಯ ಸಚಿವ ಮಾದುಸ್ವಾಮಿ, “ದೇವರು ಮಾತನಾಡಿದ್ದು ನಿಮ್ಮ ಜಿಲ್ಲೆಯಲ್ಲಿ ಮಾತ್ರ. ನಮ್ಮ ಜಿಲ್ಲೆಯಲ್ಲಿ ದೇವರು ಮಾತನಾಡಲಿಲ್ಲಪ್ಪ..ದೇವರು ಮಾತಾಡ್ತಿದ್ದಾನಂತೆ ಇವರ ಜಿಲ್ಲೆಲಿ…’ ಎಂದು ವ್ಯಂಗ್ಯ ಮಾಡಿದ್ದರು. ಕೆಲವು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುಟಿ ಖಾದರ್ ಭರ್ಜರಿ ಗೆಲುವು ಸಾಧಿಸಿದರು. ಆ ಜಯ ಅವರನ್ನು ಸ್ಪೀಕರ್ ಹುದ್ದೆ ತನಕ ಕರೆದುಕೊಂಡು ಹೋಯಿತು. ಆದರೆ ದೈವಗಳ ಹಾಗೂ ತುಳುನಾಡಿನ ಆಚರಣೆಯನ್ನು ಹಗುರವಾಗಿ ಕಂಡಿದ್ದ ಮಾದುಸ್ವಾಮಿ ಹೀನಾಯ ಸೋಲು ಕಂಡರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.