ನ್ಯೂಸ್ ನಾಟೌಟ್ :ಕೋಳಿ ಸಾರಿಗಾಗಿ ಪತ್ನಿ ಜತೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.ಪತಿಗೆ ಪತ್ನಿ ರೆಡಿ ಮಾಡಿದ ಕೋಳಿ ಸಾರು ತಿನ್ನ ಬೇಕೆಂಬ ಹಂಬಲದಿಂದಾಗಿ ಆತ ಪತ್ನಿ ಜತೆ ಕೋಳಿ ಸಾರು ಮಾಡುವಂತೆ ಹೇಳಿದ್ದಾನೆ.ಆದರೆ ಪತ್ನಿ ಅದಾಗಲೇ ಅಡುಗೆಯಾಗಿದೆ. ಕೋಳಿ ಸಾರು ಮಾಡಲ್ಲ ಎಂದು ನಿರಾಕರಿಸಿದ್ದಾಳೆ. ಇದಕ್ಕೆ ಪತ್ನಿ ಜತೆ ಜಗಳವಾಡಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯಿಂದ ವರದಿಯಾಗಿದೆ.ಪವನ್ ಕುಮಾರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ಪವನ್ ತನಗಾಗಿ ಕೋಳಿ ಸಾರು ಮಾಡುವಂತೆ ತನ್ನ ಪತ್ನಿಗೆ ಹೇಳಿದ್ದಾನೆ. ಇದಕ್ಕೊಪ್ಪದ ಆತನ ಮಡದಿ ಮನೆಯಲ್ಲಿ ಅಡುಗೆ ಸಿದ್ದಪಡಿಸಿರುವುದಾಗಿ ತಿಳಿಸಿದ್ದಾಳೆ.ಶೀಘ್ರವೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದಂಪತಿಗಳಿಬ್ಬರ ನಡುವೆ ಹೊಡೆದಾಟವಾಗಿದ್ದು ಈ ವೇಳೆ ಪತ್ನಿ ಬೇರೊಂದು ಕೋಣೆಗೆ ಹೋಗಿ ಮಲಗಿದ್ದಾಳೆ. ಇದಾದ ಕೆಲವೇ ಕ್ಷಣಗಳ ಬಳಿಕ ಪವನ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಾತನಾಡಿದ ಪವನ್ ಸಹೋದರ “ಗಲಾಟೆ ಬಳಿಕ ದಂಪತಿ ಪ್ರತ್ಯೇಕ ಕೋಣೆಗೆ ತೆರಳಿದ್ದರು. ಈ ವೇಳೆ ನನ್ನ ಸಹೋದರ ತುಂಬಾ ಹೊತ್ತಾದರೂ ರೂಮಿನ ಬಾಗಿಲನ್ನು ತೆರದಿರಲಿಲ್ಲ ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದಾಗ ಆತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ” ಎಂದಿದ್ದಾರೆ.ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.