ನ್ಯೂಸ್ ನಾಟೌಟ್ : ಬೆಂಗಳೂರು ಅಭಿವೃದ್ಧಿಯ ಜೊತೆಗೆ ಟ್ರಾಫಿಕ್ ಕಿರಿಕಿರಿಗಳಿಗೆ ಕುಖ್ಯಾತಿ ಪಡೆದಿದೆ. ಗ್ರಿಡ್ಲಾಕ್ಗಳಲ್ಲಿ ಸಿಕ್ಕಿಹಾಕಿಕೊಂಡು ಅಮೂಲ್ಯ ಸಮಯ ಮತ್ತು ತಾಳ್ಮೆಯನ್ನು ಕಳೆದುಕೊಂಡು ಹಲವರು ಸಿಟ್ಟಿಗೆದ್ದ ಘಟನೆಗಳು ನಿತ್ಯ ನಡೆಯುತ್ತಿರುತ್ತವೆ. ಆದಾಗ್ಯೂ, ಈ ಅವ್ಯವಸ್ಥೆಯ ನಡುವೆ, ಒಬ್ಬ ಮಹಿಳೆ ತನ್ನ ದೈನಂದಿನ ಪ್ರಯಾಣವನ್ನು ಅದ್ಭುತ ಕೆಲಸದ ಅವಧಿಯನ್ನಾಗಿ ಪರಿವರ್ತಿಕೊಂಡಿದ್ದು ಕಾಣಿಸಿತು.
ಟ್ವಿಟ್ಟರ್ ಬಳಕೆದಾರೊಬ್ಬರು ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಮಹಿಳೆಯೊಬ್ಬರ ವೃತ್ತಿಪರತೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
Rapido (ರಾಪಿಡೊ) ಬೈಕ್ನಲ್ಲಿ ಬೆಂಗಳೂರಿನ ಜನಸಂದಣಿಯಿಂದ ಬೇಸತ್ತು, ತನ್ನ ಲ್ಯಾಪ್ಟಾಪ್ನಲ್ಲಿ ಶ್ರದ್ಧೆಯಿಂದ ಟೈಪ್ ಮಾಡುತ್ತಿದ್ದರು! ಪ್ರಯಾಣದಲ್ಲಿರುವಾಗ ಕೆಲಸ-ಜೀವನದ ಸಮತೋಲನ ಮಾಡುತ್ತಿದ್ದಾರೆ ಎಂದು ಹೆಚ್ಚಿವರು ಕಮೆಂಟ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.