ನ್ಯೂಸ್ ನಾಟೌಟ್ : 18ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಅವರ ಖಡ್ಗಕ್ಕೆ ದಿನ ದಿನಕ್ಕೂ ಮೌಲ್ಯ ಹೆಚ್ಚಾಗುತ್ತಲೇ ಇದೆ. ಮದ್ಯದ ದೊರೆ ವಿಜಯ್ ಮಲ್ಯ ಬಳಿಯಿದ್ದ ಈ ಖಡ್ಗವನ್ನು ಲಂಡನ್ನಲ್ಲಿ ಹರಾಜು ಮಾಡಲಾಗಿದ್ದು, ಅದರ ಬೆಲೆ ಮತ್ತಷ್ಟು ಹೆಚ್ಚಿದೆ. ಬರೋಬ್ಬರಿ 140 ಕೋಟಿ ರೂಪಾಯಿಗೆ ಟಿಪ್ಪು ಸುಲ್ತಾನ್ ಅವರ ಖಡ್ಗ ಹರಾಜಾಗಿದೆ.
ಲಂಡನ್ನಲ್ಲಿ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್ಗಳಿಗೆ ($ 17.4 ಮಿಲಿಯನ್ ಅಥವಾ 140 ಕೋಟಿ ರೂ) ಮಾರಾಟವಾಗಿದೆ. ಖಡ್ಗದ ಬೆಲೆ ಅಂದಾಜಿನ ಏಳು ಪಟ್ಟು ಹೆಚ್ಚಾಗಿದೆ ಎಂದು ಮಾರಾಟವನ್ನು ಆಯೋಜಿಸಿದ ಹರಾಜು ಸಂಸ್ಥೆ ಬೊನ್ಹಾಮ್ಸ್ ಹೇಳಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜೊತೆಗೆ ವೈಯಕ್ತಿಕ ಸಂಬಂಧವನ್ನು ಸಾಬೀತುಪಡಿಸಿದ ಶಸ್ತ್ರಾಸ್ತ್ರಗಳಲ್ಲಿ ಈ ಖಡ್ಗವು ಅತ್ಯಂತ ಪ್ರಮುಖವಾಗಿದೆ ಎಂದು ಬೊನ್ಹಾಮ್ಸ್ ಹೇಳಿದೆ.
ಟಿಪ್ಪು ಸುಲ್ತಾನ್ 18 ನೇ ಶತಮಾನದ ಮೈಸೂರಿನ ಪ್ರಮುಖ ದೊರೆ. ಮೈಸೂರು ಹುಲಿ ಎಂದು ಖ್ಯಾತಿ ಪಡೆದಿರುವ ಅವರು, 1175 ಮತ್ತು 1779 ರ ನಡುವೆ ಹಲವಾರು ಸಂದರ್ಭಗಳಲ್ಲಿ ಮರಾಠರ ವಿರುದ್ಧ ಹೋರಾಡಿದ್ದಾರೆ.
2004 ರಲ್ಲಿ ವಿಜಯ್ ಮಲ್ಯ ಖರೀದಿಸಿದ್ದ ಈ ಖಡ್ಗದ ಬೆಲೆ 1.5 ಕೋಟಿ, ಅದೇ ಖಡ್ಗ ಈಗ 14೦ ಕೋಟಿ ರೂಪಾಯಿಗೆ ಹರಾಜಾಗಿದೆ. ಆದರೆ, ಈ ಖಡ್ಗ ತಮ್ಮ ಕುಟುಂಬಕ್ಕೆ ದುರಾದೃಷ್ಟ ತಂದಿದೆ ಎಂದು ಮಲ್ಯ ಭಾವಿಸಿದ್ದರು.