ನ್ಯೂಸ್ ನಾಟೌಟ್: ಸುಳ್ಯ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ.ಆಮ್ ಆದ್ಮಿ ಪಕ್ಷಕ್ಕೆ ೪೦ಕ್ಕೂ ಅಧಿಕ ಮಂದಿ ಸೇರ್ಪಡೆಗೊಂಡಿರುವ ಬಗ್ಗೆ ವರದಿಯಾಗಿದ್ದು,ಇದೀಗ ಸುಳ್ಯ ವಿಧಾನಸಭಾ ಕ್ಷೇತ್ರ ತೀವ್ರ ಕುತೂಹಲಕ್ಕೂ ಕಾರಣವಾಗಿದೆ.
ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಸುಳ್ಯದ ಪಾಲ್ತಾಡು ಸಮೀಪ ಚೆನ್ನಾರು ಎಂಬಲ್ಲಿ ಸುಮಾರು 40 ಕ್ಕೂ ಅಧಿಕ ಮಂದಿ ಶಾಫಿ ಎಂಬವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ದಿಢೀರ್ ಬೆಳವಣಿಗೆಯಲ್ಲಿಆಮ್ ಆದ್ಮಿ ಪಾರ್ಟಿ ಮುಖಂಡ ಖಲಂದರ್ ಎಲಿಮಲೆ ನೇತೃತ್ವದಲ್ಲಿ ಅಶ್ರಫ್ ಎಂ.ಆರ್., ಸಂಶುದ್ದೀನ್, ಮನ್ಸೂರ್, ಸತ್ತಾರ್ ಮತ್ತಿತರರು ಆಪ್ ಪ್ರಮುಖರು ಮಾತುಕತೆ ನಡೆಸಿ 40 ಕ್ಕೂ ಹೆಚ್ಚು ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದರು ಎಂಬ ಮಾಹಿತಿ ಲಭ್ಯವಾಗಿದೆ.