ನ್ಯೂಸ್ ನಾಟೌಟ್ : ಸುಳ್ಯದ ಸ್ಥಳೀಯರಿಗೆ ಬೇಸಿಗೆಯಲ್ಲಿ ನೆರಳು ನೀಡುತ್ತಿದ್ದ ಬಾದಾಮಿ ಮರಗಳನ್ನು ಬುಡ ಸಮೇತ ಕಡಿದು ಹಾಕಿರುವ ಘಟನೆ ಪೈಚಾರು ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಸೋಮವಾರ ನಡೆದಿದೆ. ಮೆಸ್ಕಾಂ ವಿರುದ್ದ ವ್ಯಕ್ತಿಯೊಬ್ಬರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ 7 ವರ್ಷಗಳ ಮೊದಲು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ನೆರಳಿಗಾಗಿ ಸುಳ್ಯ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಬಾದಾಮಿ ಗಿಡಗಳನ್ನು ನೆಡಲಾಗಿತ್ತು.ಈ ಗಿಡವು ಬೆಳೆದು ಈ ಪರಿಸರದ ಜನತೆಗೆ ಅಲ್ಲದೆ ಪ್ರವಾಸಿಗರಿಗೆ ವಿಶ್ರಮಿಸಲು ನೆರಳು ನೀಡುತ್ತಿತ್ತು ಹಾಗೂ ಮಳೆಗಾಲದ ಮುಂಚಿತವಾಗಿ ವಿದ್ಯುತ್ ಕಂಬಗಳಿಗೆ ಅಡ್ಡಲಾಗಿ ನಿಂತಿದ್ದ ಬಾದಾಮಿ ಮರದ ಕೊಂಬೆಗಳನ್ನು ಕಡಿಯುವ ಬದಲು ಮರದ ಬುಡವನ್ನೆ ಕಡಿದು ಹಾಕಿದ್ದಾರೆ.
ಇದನ್ನು ನೋಡಿದ ಸ್ಥಳೀಯರು ಹಾಗೂ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಆರ್ ಬಿ ಬಶೀರ್ ರವರು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.