ನ್ಯೂಸ್ ನಾಟೌಟ್: ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಯನ್ನು ಸಂದರ್ಶಿಸುವ ಸುವರ್ಣಾವಕಾಶವನ್ನು ಸುಳ್ಯದ ವ್ಯಕ್ತಿಯೊಬ್ಬರು ತಮ್ಮದಾಗಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಆಯ್ಕೆಯಾಗಿದ್ದು ಅದರಲ್ಲಿ ಸುಳ್ಯದ ನಾರ್ಣಕಜೆಯ ರಾಮಚಂದ್ರ ಕೂಡ ಒಬ್ಬರು ಅನ್ನುವುದು ವಿಶೇಷ. ಬುಡಕಟ್ಟು ಜೇನು ಕುರುಬ, ಕೊರಗ ಬುಡಕಟ್ಟು ಜನರನ್ನು ರಾಷ್ಟ್ರಪತಿಯವರು ಭೇಟಿ ಮಾಡಿ ಸಂದರ್ಶನ ನಡೆಸಲಿದ್ದಾರೆ. ಬುಡಕಟ್ಟು ಅಭಿವೃದ್ಧಿ ಯೋಜನಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೂನ್ 11ರಿಂದ 13ರ ತನಕ ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿಯ ರತ್ನ, ಕಿನ್ನಿಗೊಳಿಯ ಸುಪ್ರಿಯಾ ಹಾಗೂ ಮರಕಡದ ಎಂ ಸುಂದರ್ ಕೂಡ ರಾಷ್ಟ್ರಪತಿಗಳನ್ನು ಸಂದರ್ಶಿಸಲಿದ್ದಾರೆ.