ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ಸುಳ್ಯದ ಜೀವನಾಡಿ ಪಯಸ್ವಿನಿ ನದಿಯಲ್ಲೂ ಎಗ್ಗಿಲ್ಲದೆ ಮರಳುಗಾರಿಕೆ ನಡೆಯುತ್ತಿದೆ. ಇದೀಗ ಗಣಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ನಾನ್-ಸಿಆರ್ಝಡ್ ಪ್ರದೇಶದಲ್ಲಿ ಮರಳು ಬ್ಲಾಕ್ ಗುರುತಿಸಿ ಇ-ಹರಾಜು ಪ್ರಕ್ರಿಯೆ ಮೂಲಕ ಗುತ್ತಿಗೆ ಮಂಜೂರಾತಿ ಮಾಡಿದೆ. ಈ ಪಟ್ಟಿಯಲ್ಲಿ ಸುಳ್ಯದ ಪಯಸ್ವಿನಿ ನದಿಯ ಹೆಸರು ಇಲ್ಲ. ಹೀಗಾಗಿ ಪಯಸ್ವಿನಿ ನದಿಯಲ್ಲಿಮರಳುಗಾರಿಕೆ ನಡೆಸುವುದು ಅಕ್ರಮವಾಗಿದೆ ಎನ್ನುವ ಸಂದೇಶ ರವಾನೆಯಾಗಿದೆ.
ಪ್ರಸ್ತುತ 23 ಮರಳು ಬ್ಲಾಕ್ಗಳ ಸ್ಟಾಕ್ ಯಾರ್ಡ್ನಲ್ಲಿ ಲಭ್ಯವಿರುವ ಮರಳನ್ನು ಜಿಲ್ಲೆಯಲ್ಲಿನ ಸರಕಾರಿ, ಇತರೆ ಕಾಮಗಾರಿಗಳು ಹಾಗೂ ಸಾರ್ವಜನಿಕರು ಪೂರೈಸಿಕೊಳ್ಳಬಹುದಾಗಿದೆ. ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ವಿವರ, ಸ್ಟಾಕ್ಯಾರ್ಡ್ನಲ್ಲಿ ದಾಸ್ತಾನಿರುವ ಮರಳಿನ ಪ್ರಮಾಣ, ಮಾರಾಟದ ಮೊತ್ತ ಮತ್ತು ಗುತ್ತಿಗೆದಾರರ ದೂರವಾಣಿ ವಿವರಗಳು ಇಂತಿವೆ.
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನಲ್ಲಿ 10,000 ಮೆಟ್ರಿಕ್ ಟನ್ ದಾಸ್ತಾನಿದೆ. ಮಾಹಿತಿಗೆ (ಚಂದ್ರಹಾಸ್ ಮೊ.ಸಂ: 9964277142), ಬಂಟ್ವಾಳ ತಾಲೂಕಿನ ಬಾಳ್ತಿಲದಲ್ಲಿ 10,000 ಮೆಟ್ರಿಕ್ ಟನ್ ದಾಸ್ತಾನಿದೆ. (ರವಿಶಂಕರ್ ಮೊ.ಸಂ: 9945131987) ಬೆಳ್ತಂಗಡಿ ತಾಲೂಕಿನ ಪೆಟ್ರಮೆಯಲ್ಲಿ 1,000 ಮೆಟ್ರಿಕ್ ಟನ್ ದಾಸ್ತಾನಿದೆ. (ಜಾಯ್ ಕೆ.ಎ. 9611994991), ಬೆಳ್ತಂಗಡಿ ತಾಲೂಕಿನ ತೆಕ್ಕಾರು-ಬ್ಲಾಕ್ 1,000 ಮೆಟ್ರಿಕ್ ಟನ್ ದಾಸ್ತಾನಿದೆ. (ಆದಂ ಬಿ. 8970580311) ಬೆಳ್ತಂಗಡಿ ತಾಲೂಕಿನ ಬಾರ್ಯಾ-ಬ್ಲಾಕ್-1. 3,000 ಮೆಟ್ರಿಕ್ ಟನ್ ದಾಸ್ತಾನಿದೆ. (ತನಿಯಪ್ಪ7619668744), ಬೆಳ್ತಂಗಡಿ ತಾಲೂಕಿನ ಬಾರ್ಯಾ- ಬ್ಲಾಕ್-2. 2,500 ಮೆಟ್ರಿಕ್ ಟನ್ ದಾಸ್ತಾನಿದೆ. (ಇಬ್ರಾಹಿಂ ಪಿ. 9448328137) ಮಂಗಳೂರು ತಾಲೂಕಿನ ಕುಳವೂರು 10,000 ಮೆಟ್ರಿಕ್ ಟನ್ ದಾಸ್ತಾನಿದೆ.(ಪ್ರವೀಣ್ ಆಳ್ವ 9880980933). ಮಂಗಳೂರು ತಾಲೂಕಿನ ಮೊಗರು 6,000 ಮೆಟ್ರಿಕ್ ಟನ್ ದಾಸ್ತಾನಿದೆ. (ಮುಹಮ್ಮದ್ ಅಶ್ರಫ್ 9480345485). ಮಂಗಳೂರು ತಾಲೂಕಿನ ಮೊಗರು 13,000 ಮೆಟ್ರಿಕ್ ಟನ್ ದಾಸ್ತಾನಿದೆ. (ರಾಜೇಂದ್ರ ಮಂಡ 9480345485), ಮಂಗಳೂರು/ಅಡ್ಡೂರು 6,000 ಮೆಟ್ರಿಕ್ ಟನ್ ದಾಸ್ತಾನಿದೆ. ಮುಹಮ್ಮದ್ ಝಕರಿಯ (9448868713), ಪುತ್ತೂರು/34-ನೆಕ್ಕಿಲಾಡಿ, 10,000 ಮೆಟ್ರಿಕ್ ಟನ್ ದಾಸ್ತಾನಿದೆ. (ಎಸ್.ಆನಂದ 9480345485), ಪುತ್ತೂರು ತಾಲೂಕಿನ ಹಿರೆಬಂಡಾಡಿ 3,500 ಮೆಟ್ರಿಕ್ ಟನ್ ದಾಸ್ತಾನಿದೆ. (ರಾಮಣ್ಣ ಗೌಡ 9741268778), ಕಡಬ ತಾಲೂಕಿನ ಕೇನ್ಯ-ಬ್ಲಾಕ್-1.200 ಮೆಟ್ರಿಕ್ ಟನ್ ದಾಸ್ತಾನಿದೆ. ( ಸುಬ್ರಮಣ್ಯ ಕೆ. 9880649976), ಕಡಬ ತಾಲೂಕಿನ ಅಲಂಕಾರು ಬ್ಲಾಕ್-2. 5,000 ಮೆಟ್ರಿಕ್ ಟನ್ ದಾಸ್ತಾನಿದೆ. (ಕೃಷ್ಣಮೂರ್ತಿ 997223336), ಕಡಬ ತಾಲೂಕಿನ ಸವಣೂರುನಲ್ಲಿ 500 ಮೆಟ್ರಿಕ್ ಟನ್ ದಾಸ್ತಾನಿದೆ. (ಚಿನ್ನಪ್ಪ9900677989). ಕಡಬ ತಾಲೂಕಿನ ಪೆರಾಬೆ ಬ್ಲಾಕ್ 1. 3000 ಮೆಟ್ರಿಕ್ ಟನ್ ದಾಸ್ತಾನಿದೆ. ಮೊನ್ನಪ್ಪಗೌಡ 9481016196. ಕಡಬ ತಾಲೂಕಿನ ಪೆರಾಬೆ ಬ್ಲಾಕ್-2. 7000 ಮೆಟ್ರಿಕ್ ಟನ್ ದಾಸ್ತಾನಿದೆ. (ಎಲಿಯಾಸ್ 9741882254), ಕಡಬ ತಾಲೂಕಿನ ಕೊಲ ಬ್ಲಾಕ್-2. 500 ಮೆಟ್ರಿಕ್ ಟನ್ ದಾಸ್ತಾನಿದೆ. (ರಾಮಕೃಷ್ಣ ನಾಯಕ್ 9738928111), ಕಡಬ ತಾಲೂಕಿನ ಕೊಲದಲ್ಲಿ 2,000 ಮೆಟ್ರಿಕ್ ಟನ್ ದಾಸ್ತಾನಿದೆ. (ಅಬ್ದುಲ್ಲತೀಫ್ 9901189644), ಕಡಬ ತಾಲೂಕಿನ ಅಲಂಕಾರು 2000 ಮೆಟ್ರಿಕ್ ಟನ್ ದಾಸ್ತಾನಿದೆ. (ಆನಂದ್-9480345485), ಕಡಬ ತಾಲೂಕಿನ ಕುಟ್ರುಪಾಡಿ 1,500 ಮೆಟ್ರಿಕ್ ಟನ್ ದಾಸ್ತಾನಿದೆ. (ಪ್ರದೀಪ್ ಬೊಬ್ಬೆಕೇರೆ 9448500940), ಕಡಬ ತಾಲೂಕಿನ ನೂಜಿಬಾಳ್ತಿಲ 2000 ಮೆಟ್ರಿಕ್ ಟನ್ ದಾಸ್ತಾನಿದೆ. (ಪುರಂದರ -9741882254), ಕಡಬ ತಾಲೂಕಿನ ನೂಜಿಬಾಳ್ತಿಲ 2000 ಮೆಟ್ರಿಕ್ ಟನ್ ದಾಸ್ತಾನಿದೆ. (ಸುಬ್ರಮಣ್ಯ 9880649976) ಅವರನ್ನು ಸಂಪರ್ಕಿಸಿ ಸಾರ್ವಜನಿಕರು ಅವಶ್ಯವಿರುವ ಮರಳನ್ನು ಪಡೆಯಬಹುದಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.