ನ್ಯೂಸ್ ನಾಟೌಟ್ : ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು ಕೆಲ ಭಾಗಗಳಲ್ಲಿ ನಿನ್ನೆ ರಾತ್ರಿ ಗುಡುಗು ಮಿಂಚು ಸಹಿತ ಮಳೆಯಾಗಿದ್ದು,ಸರಿಸುಮಾರು 10.30ಕ್ಕೆ ಆರಂಭಗೊಂಡಿತು.ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಕಂಡು ಬಂದಿದ್ದು ನಿನ್ನೆ ಮಳೆಯಾಗಿದೆ.ಕೆಲವೆಡೆ ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು.
ಇನ್ನು ಸಂಪಾಜೆಯ ಕೊಯಿನಾಡು ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಅರಣ್ಯ ಇಲಾಖೆ ಬಳಿ ಭಾರೀ ಗಾಳಿಗೆ ದೊಡ್ಡ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಘಟನೆ ವರದಿಯಾಗಿದೆ.ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯ ನಡೆದ ಬಳಿಕ ದೈನಂದಿನ ಕೆಲಸದ ನಿಮಿತ್ತ ಹೋಗುವ ವಾಹನ ಸವಾರರು ಕೊಂಚ ನಿರಾಳರಾದರು.ಇನ್ನೂ ಮೇ.11 ರವರೆಗೆ ದಕ್ಷಿಣ ಕನ್ನಡ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.