ನ್ಯೂಸ್ ನಾಟೌಟ್: ಶಾಲೆಯ ಟೆರೇಸ್ನಿಂದ ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿದ್ದು, ಸಾಮೂಹಿಕ ಅತ್ಯಾಚಾರ ನಡೆಸಿ, ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಅಯೋಧ್ಯೆಯ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ತಂದೆ ಆರೋಪಿಸಿದ್ದಾರೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಶಾಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಸಿಬ್ಬಂದಿ, ಒಬ್ಬರು ಕ್ರೀಡಾ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತರಗತಿ ಇಲ್ಲದಿದ್ದರೂ 10ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರಾಂಶುಪಾಲರು ಬೆಳಗ್ಗೆ 8:30ಕ್ಕೆ ಕರೆ ತಂದಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ನನ್ನ ಮಗಳಿಗೆ ಉಯ್ಯಾಲೆಯಿಂದ ಬಿದ್ದು ಗಾಯವಾಗಿದೆ ಎಂದು ಬೆಳಿಗ್ಗೆ 9:50 ರ ಸುಮಾರಿಗೆ ಪ್ರಾಂಶುಪಾಲರು ನನಗೆ ಮಾಹಿತಿ ನೀಡಿದರು ಎಂದು ತಂದೆ ಹೇಳಿಕೆ ನೀಡಿದ್ದಾರೆ.
ನಾನು ಶಾಲೆಗೆ ತಲುಪಿದಾಗ, ನನ್ನ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ನನಗೆ ತಿಳಿಸಲಾಯಿತು. ಆಕೆಯ ದೇಹದಾದ್ಯಂತ ಗಾಯದ ಗುರುತುಗಳಿವೆ, ಉಯ್ಯಾಲೆಯಿಂದ ಬಿದ್ದರೆ ಈ ರೀತಿಯ ಗಾಯಗಳಾಗಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯು ಕಟ್ಟಡದಿಂದ ಬಿದ್ದ ಕಾರಣದಿಂದ ಗಾಯಗಳಾಗಿವೆ ಎಂದು ಹೇಳಿದೆ. ಮರಣೋತ್ತರ ಪರೀಕ್ಷೆಯ ಪರಿಣಾಮವಾಗಿ ಆಘಾತ ಮತ್ತು ರಕ್ತಸ್ರಾವವು ಸಾವಿಗೆ ಕಾರಣ ಎಂದು ವರದಿಗಳು ಹೇಳುತ್ತವೆ ಎಂದು ಅಯೋಧ್ಯೆಯ ಪೊಲೀಸ್ ಉಪ ನಿರೀಕ್ಷಕ ಜಿ ಮುನಿರಾಜ್ ಹೇಳಿದ್ದಾರೆ.
ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪ್ರಾಂಶುಪಾಲರ ಹೇಳಿಕೆಗೆ ವ್ಯತಿರಿಕ್ತವಾಗಿ ಬಾಲಕಿ ಶಾಲಾ ಕಟ್ಟಡದ ಟೆರೇಸ್ನಿಂದ ಬಿದ್ದಿದ್ದಾಳೆ ಎಂಬುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅತ್ಯಾಚಾರ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.