ನ್ಯೂಸ್ ನಾಟೌಟ್: ಸ್ಯಾಂಡಲ್ ವುಡ್ ನ ಮೋಹಕ ತಾರೆ , ದುಂಡು ಮುಖದ ಚೆಲ್ವೆ, ಕಾಂಗ್ರೆಸ್ ಮಾಜಿ ಸಂಸದೆ, ನಟಿ ರಮ್ಯಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ‘ನಿಮ್ಮ ಮದುವೆ ಯಾವಾಗ?’ ಎಂಬ ಪ್ರಶ್ನೆ ಎದುರಿಸುತ್ತಲೇ ಇರುತ್ತಾರೆ. ಇದೀಗ ಮಂಡ್ಯದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ವೇಳೆ ಅಭಿಮಾನಿಗಳಿಂದ ಮತ್ತದೇ ಪ್ರಶ್ನೆ ಎದುರಾಗಿದೆ.
ಈ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗಳಿಗೆ ರಮ್ಯಾ ಅವರು ಉತ್ತರ ನೀಡಿದ್ದಾರೆ. ಪತ್ರಕರ್ತರೊಬ್ಬರು ಮೇಡಂ ನಿಮ್ಮ ಮದುವೆ ಯಾವಾಗ ಅಂತ ಜನ ಕೇಳುತ್ತಿದ್ದಾರೆ.ಇದಕ್ಕೆ ನಿಮ್ಮ ಉತ್ತರ ಏನು ಅನ್ನುವುದಕ್ಕೆನನಗೆ ಮೊದಲು ಹುಡುಗನನ್ನು ಹುಡುಕಿ. ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ. ನನಗೆ ಒಬ್ಬರೂ ಕಾಣುತ್ತಿಲ್ಲ, ನೀವೇ ಹುಡುಕಿ ಕೊಡಿ. ನನಗೂ ಹುಡುಕಿ…ಹುಡುಕಿ ಸಾಕಾಗಿದೆ ಎಂದು ಹೇಳಿದ್ದಾರೆ. ಬೇಕಿದ್ದರೆ ನೀವೇ ಸ್ವಯಂವರ ಏರ್ಪಾಟು ಮಾಡಿ, ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.
ನಾನು ಮಂಡ್ಯದವಳು. ನಾನು ಗೌಡತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ. ನಮ್ಮ ತಾಯಿ ಊರು ಮಂಡ್ಯ, ನಮ್ಮ ತಂದೆ ಸತ್ತಿದ್ದು ಇಲ್ಲೇ, ನನ್ನ ಅಭ್ಯರ್ಥಿ ಮಾಡಿದ್ದು ಇಲ್ಲೇ, ಮಂಡ್ಯ ಜಿಲ್ಲೆಯ ಜನರು ನನಗೆ ಬೆಂಬಲ ನೀಡಿದ್ದಾರೆ. ಈ ಅಭಿಮಾನವನ್ನು ನಾನು ಯಾವತ್ತೂ ಮರೆಯಲ್ಲ, ಇದು ಕಮ್ಮಿಯೂ ಆಗಲ್ಲ. ಮಂಡ್ಯ ಸಂಬಂಧ ಕೇವಲ ರಾಜಕೀಯವಾಗಿ ಅಲ್ಲ, ನನಗೆ ಮಂಡ್ಯ ಕುಟುಂಬದ ತರಹ ಎಂದು ರಮ್ಯಾ ಹೇಳಿದ್ದಾರೆ.