ನ್ಯೂಸ್ ನಾಟೌಟ್ ಪುತ್ತೂರು: ನೀರಿನ ಸಮಸ್ಯೆಯಿಂದ ತತ್ತರಿಸಿರುವ ಪುತ್ತೂರಿನ ಜನತೆಗೆ ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಂಗಳವಾರ 1500 ಸೀಯಾಳಗಳಿಂದ ಅಭಿಷೇಕ ನಡೆಯಿತು.
ಬಿಸಿಲಿನ ಬೇಗೆಗೆ ತತ್ತರಿಸಿರುವ ಜನತೆ ಶೀಘ್ರ ಮಳೆಯಾಗಿ ನೀರು ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ದೇವಳದ ಸಿಬ್ಬಂದಿ ಭಕ್ತರು ಉಪಸ್ಥಿತರಿದ್ದರು.