ನ್ಯೂಸ್ ನಾಟೌಟ್ : ಜನ ಬಲದಿಂದ ಅಧಿಕಾರ ಹಿಡಿದ ಜನನಾಯಕ ಊರಿಗೆ ಮಾದರಿಯಾಗಿರಬೇಕು ಅನ್ನುವಷ್ಟರಟ್ಟಿಗೆ ಮಟ್ಟಿಗೆ ಶಾಸಕ ಪ್ರದೀಪ್ ಈಶ್ವರ್ ಕೆಲಸ ಸದ್ದು ಮಾಡುತ್ತಿದೆ. ಪರಿಶ್ರಮ ಅಕಾಡೆಮಿಯ ಸಂಸ್ಥಾಪಕ ಪ್ರದೀಪ್ ಈಶ್ವರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ. ಇದೀಗ ಹೆತ್ತ ತಂದೆ-ತಾಯಿಯನ್ನು ಗೌರವದಿಂದ ನಡೆಸಿಕೊಳ್ಳದಿರುವ ಮಕ್ಕಳ ವಿರುದ್ಧ ಹರಿಹಾಯ್ದಿರುವ ಪ್ರದೀಪ್ ಈಶ್ವರ್ ತಂದೆ-ತಾಯಿಯನ್ನು ಅನಾಥಾಶ್ರಮಕ್ಕೆ ಬಿಡುವ ಮಕ್ಕಳ ವಿರುದ್ಧ ಎಫ್ಐಆರ್ ಹಾಕಿಸ್ತೀನಿ ಎಂದು ಗುಡುಗಿದ್ದಾರೆ.
“ನನ್ನ ಆಸೆ ಏನು ಗೊತ್ತಾ, ಅನಾಥಾಶ್ರಮದಲ್ಲಿ ಹೋಗಿ ಅನ್ನ ಹಾಕೋದಲ್ಲ ಸಾಧನೆ. ಚಿಕ್ಕಬಳ್ಳಾಪುರದಲ್ಲಿ ಅನಾಥಶ್ರಮನೇ ಇರಬಾರದು. ಎಲ್ಲರೂ ಅವರ ತಂದೆ ತಾಯಿನ ಮನೆಯಲ್ಲಿ ಸಾಕ್ಬೇಕು. ನಾನು ಆ ತರ ಸೊಸೈಟಿ ನೋಡ್ಬೇಕು. ನಾನು ನನ್ನ ಹುಟ್ಟಿದ ಹಬ್ಬಕ್ಕೆ ಅನ್ನ ಹಾಕೋದಲ್ಲ ಗ್ರೇಟ್ ನೆಸ್ . ಅನಾಥಾಶ್ರಮ ಇರಬಾರದು ಇಲ್ಲಿ. ಇವತ್ತು ಹೇಳ್ತಾ ಇದ್ದೀನಿ,ಯಾವತ್ತೂ ಹೇಳ್ತಾ ಇದ್ದೀನಿ.ಯಾರಾದ್ರೂ ತಮ್ಮ ತಂದೆ ತಾಯಿನ ಆಚೆ ಹಾಕಿದ್ದಂತಾದ್ರೆ ಅಂತ ಮಕ್ಕಳ ವಿರುದ್ಧ ಎಫ್.ಐ.ಆರ್ ಹಾಕಿಸ್ತೀನಿ .ಅದೇನಾದ್ರೂ ಆಗಲಿ ನೋಡೋಣ. ನಿಮ್ಮ ತಂದೆ ತಾಯಿನ ಗೌರವದಿಂದ ನಡೆಸ್ಕೋಬೇಕು. ಏನಾದರೂ ಕಿತ್ತಾಟ ಇದ್ದರೆ ನಿಮ್ಮ ಮನೆಯಲ್ಲಿ ಇಟ್ಕೋಬೇಕು. ಯಾರಾದರೂ ತಂದೆ ತಾಯಿನಾ ಅನಾಥಾಶ್ರಮದಲ್ಲಿ ಬಿಟ್ರೆ ಅವರ ಮಗನ ಮೇಲೆ ಕೇಸ್ ಮಾಡ್ತೀನಿ” ಎಂದು ಗುಡುಗಿದ್ದಾರೆ.